ADVERTISEMENT

7 ಮಂದಿ ಮುಖ್ಯಮಂತ್ರಿಗಳನ್ನು ನೀಡಿದ ಬಣಜಿಗ ಸಮಾಜ: ಪ್ರತಾಪಗೌಡ ಪಾಟೀಲ

ಬಣಜಿಗ ಸಮಾಜದ ತಾಲ್ಲೂಕು ಸಮಾವೇಶದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:57 IST
Last Updated 24 ಜುಲೈ 2024, 15:57 IST
ಮಸ್ಕಿಯಲ್ಲಿ ಬುಧವಾರ ನಡೆದ ಬಣಜಿಗ ಸಮಾಜದ ತಾಲ್ಲೂಕು ಸಮಾವೇಶವನ್ನ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ತಕ್ಕಡಿ ತೂಗಿ ಉದ್ಘಾಟಿಸಿದರು
ಮಸ್ಕಿಯಲ್ಲಿ ಬುಧವಾರ ನಡೆದ ಬಣಜಿಗ ಸಮಾಜದ ತಾಲ್ಲೂಕು ಸಮಾವೇಶವನ್ನ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ತಕ್ಕಡಿ ತೂಗಿ ಉದ್ಘಾಟಿಸಿದರು   

ಮಸ್ಕಿ: ‘ರಾಜ್ಯಕ್ಕೆ 7 ಮಂದಿ ಪ್ರಾಮಾಣಿಕ ಹಾಗೂ ದಕ್ಷ ಮುಖ್ಯಮಂತ್ರಿಗಳನ್ನು ಕೊಟ್ಟ ಸಮಾಜ ಯಾವುದಾದರೂ ಇದ್ದರೆ ಅದು ಬಣಜಿಗ ಸಮಾಜ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಬಣಜಿಗ ಸಮಾಜದ ತಾಲ್ಲೂಕು ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರ‌ಮದಲ್ಲಿ ಮಾತನಾಡಿ,‘ಕಾಯಕದ ಜೊತೆಗೆ ಎಲ್ಲಾ ರಂಗಗಳಲ್ಲಿ ಬಣಜಿಗ ಸಮಾಜ ಗುರುತಿಸಿಕೊಂಡಿದೆ‌‌. ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಅನೇಕ ಮಹನೀಯರು ಹೆಸರು ಮಾಡಿದ್ದಾರೆ’ ಎಂದರು.

ಪಟ್ಟಣದ ಯಾವುದೇ ಧಾರ್ಮಿಕ, ಸಾಹಿತ್ಯ ಕಾರ್ಯಗಳ ಯಶಸ್ಸಿಗೆ ಬಣಜಿಗ ಸಮಾಜದ ಕೊಡುಗೆ ಅಪಾರ ಎಂದರು. ಕೆ.ಎ.ಬಳಿಗಾರ ವಿಶೇಷ ಉಪನ್ಯಾಸ ನೀಡಿದರು.

ADVERTISEMENT

ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಡಾ. ಶಿವಬಸ್ಸಪ್ಪ ಹೆಸರೂರು, ಕೆಪಿಸಿಸಿ ಎಸ್‌.ಟಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರುವಿಹಾಳ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಉಮಕಾಂತಪ್ಪ ಸಂಗನಾಳ, ದೊಡ್ಡಪ್ಪ ಕಡಬೂರು, ಡಾ.ಮಲ್ಲಿಕಾರ್ಜುನ ಇತ್ಲಿ, ಸೂಗಣ್ಣ ಬಾಳೆಕಾಯಿ, ಶ್ರೀಶೈಲಪ್ಪ ಲಿಂಗಸುಗೂರು, ಪಂಪಣ್ಣ ನಂದಾ, ಮಲ್ಲಿಕಾರ್ಜುನ ಯಂಬಲದ, ಬಸ್ಸಮ್ಮ ಕಡಿ ಹಾಗೂ ಕವಿತಾ ಕೋಡಿಹಾಳ ಹಾಜರಿದ್ದರು.

ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮಾಜದಿಂದ ಸನ್ಮಾನಿಸಲಾಯಿತು.

ಸಮಾಜದ ನೂತನ ಗೌರವಾಧ್ಯಕ್ಷರಾಗಿ ಡಾ.ನಾಗರಾಜ ಚೌಡಶೆಟ್ಟಿ, ಅಧ್ಯಕ್ಷರಾಗಿ ವೀರೇಶ ಸೌದ್ರಿ ಪದಗ್ರಹಣ ಮಾಡಿದರು.

ಸಹನಾ ಎಂ.ಬ್ಯಾಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.