ADVERTISEMENT

ರೈತರಿಗೆ ಉಪದ್ರವ ನೀಡುತ್ತಿದ್ದ ಕರಡಿ ಎರಡು ತಿಂಗಳ ಸತತ ಪ್ರಯತ್ನದ ನಂತರ ಬೋನಿಗೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 10:24 IST
Last Updated 12 ಡಿಸೆಂಬರ್ 2020, 10:24 IST
ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸೆರೆ ಸಿಕ್ಕ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಾಂತರಿಸುತ್ತಿರುವುದು
ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸೆರೆ ಸಿಕ್ಕ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಾಂತರಿಸುತ್ತಿರುವುದು   

ಮುದಗಲ್: ಸಮೀಪದ ಪಿಕಳಿಹಾಳ ಗ್ರಾಮದ ಹೊರವಲಯದಲ್ಲಿ ಕರಡಿಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಮುದಗಲ್ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರಿಗೆ ಕರಡಿ ಉಪದ್ರವ ನೀಡಿತ್ತು. ಸಾರ್ವಜನಿಕರು ಆತಂಕಗೊಂಡಿದ್ದರು. ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ಕಳೆದ ಎರಡು ತಿಂಗಳುಗಳಿಂದ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆ ಹಿಡಿಯಲು ಬೋನು ಇಟ್ಟು ಅದನ್ನು ಆಗಾಗ್ಗೆ ಸ್ಥಳಾಂತರಿಸುತ್ತಿದ್ದರು. ಕೊನೆಗೂ ಕರಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕರಡಿಯನ್ನು ಸ್ಥಳಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಲಿಂಗಸುಗೂರು ವಲಯ ಅರಣ್ಯಾಧಿಕಾರಿ ಚನ್ನಬಸವರಾಜ ಕಟ್ಟಿಮನಿ, ಉಪ ಅರಣ್ಯ ವಲಯಾಧಿಕಾರಿ ಹುಸೇನ್ ಬಾಷಾ, ಹುಲ್ಲಪ್ಪ ಮಜ್ಜಗಿ ಹಾಗೂ ಹುಚ್ಚಪ್ಪ ಕುಂಬಾರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.