ರಾಯಚೂರು: ಸಚಿವ ಎನ್.ಎಸ್.ಬೋಸರಾಜು ಅವರ ಜನ್ಮದಿನದ ಅಂಗವಾಗಿ ನಗರದ ಆಶಾಪುರ ರಸ್ತೆಯ ಆಶಾದೀಪ ವೃದ್ಧಾಶ್ರಮದಲ್ಲಿ ರಕ್ತದಾನ ಶಿಬಿರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ,‘ಎನ್.ಎಸ್.ಬೋಸರಾಜು ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಅವರು ಚಾಣಕ್ಷ ರಾಜಕಾರಣಿಯಾಗಿದ್ದಾರೆ’ ಎಂದು ಹೇಳಿದರು.
ನಗರಸಭೆ ಸದಸ್ಯ ಜಯಣ್ಣ, ಬಸವರಾಜ ಪಾಟೀಲ ಅತ್ತನೂರು, ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ಪಟ್ಟಿ, ಎನ್.ಎಸ್.ಬೋಸರಾಜು. ಅಭಿಮಾನಿ ಸಂಘದ ಸಂಸ್ಥಾಪಕ ಅಧ್ಯಕ್ಷ ಬಂದೇನವಾಜ, ತಾನಾಜಿ, ಮೋಸಿನ್ ಖಾನ್, ತಾಯಣ್ಣ ಗೌಡ, ಮಹೇಶಕುಮಾರ, ರಾಜೇಶ, ಶಬ್ಬಿರ್, ಕುಮಾರಸ್ವಾಮಿ, ವೆಂಕಟೇಶ ಮೋಯಿನ್ ಖಾನ್, ಮಕ್ಬೂಲ್, ರಾಜು, ಸಲೀಂ, ಗಂಗಾಧರ ಹಾಗೂ ಯೂನೂಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.