ADVERTISEMENT

‘ಸಂತಿ ಸರದಾರ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 2:20 IST
Last Updated 13 ಫೆಬ್ರುವರಿ 2021, 2:20 IST
ರಾಯಚೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ವಕೀಲ ಮಲ್ಲಣ್ಣ ಎಸ್‌.ಹರವಾಳ ಅವರ ಸಾಮಾಜಿಕ ನಾಟಕ ‘ಸಂತಿ ಸರದಾರ’ ಕೃತಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಲೋಕಾರ್ಪಣೆಗೊಳಿಸಿದರು
ರಾಯಚೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ವಕೀಲ ಮಲ್ಲಣ್ಣ ಎಸ್‌.ಹರವಾಳ ಅವರ ಸಾಮಾಜಿಕ ನಾಟಕ ‘ಸಂತಿ ಸರದಾರ’ ಕೃತಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಲೋಕಾರ್ಪಣೆಗೊಳಿಸಿದರು   

ರಾಯಚೂರು: ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ವಕೀಲ ಮಲ್ಲಣ್ಣ ಎಸ್‌.ಹರವಾಳ ಅವರು ಬರೆದಿರುವ ಸಾಮಾಜಿಕ ನಾಟಕ ‘ಸಂತಿ ಸರದಾರ’ ಕೃತಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಲೋಕಾರ್ಪಣೆಗೊಳಿಸಿದರು.

ಆನಂತರ ಮಾತನಾಡಿದ ಅವರು, ‘ಮಲ್ಲಣ್ಣ ಅವರ ಸಾಹಿತ್ಯ ಪ್ರೀತಿ ಶ್ಲಾಘನೀಯವಾಗಿದೆ. ಆದರೆ, ಪ್ರೋತ್ಸಾಹದ ಕೊರತೆ ಎದ್ದು ಕಾಣುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮಲ್ಲಣ್ಣ ಹರವಾಳ ಅವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ರಾಯಚೂರು ಕಾರ್ಖಾನೆಗಳ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮೀರೆಡ್ಡಿ, ಜಿಲ್ಲಾ ಸರ್ಕಾರಿ ವಕೀಲ ರಾಘವೇಂದ್ರ, ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

ಶ್ರೀನಿವಾಸರಾವ ಬಾಗಲವಾಡ, ಕೇಶವಮೂರ್ತಿ ಕುಲಕರ್ಣಿ, ರೆಡ್ಡಿ ತಿಮ್ಮಯ್ಯ ಇದ್ದರು. ಸಾಹಿತಿ ಎಂ.ಎಸ್‌.ಗೋನಾಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.