ಲಿಂಗಸುಗೂರು: ‘ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿರುವ ತಮಿಳು ನಟ ಕಮಲ್ ಹಾಸನ್ ಅವರ ಚಿತ್ರಗಳನ್ನು ರಾಜ್ಯದಲ್ಲಿ ಬಹಿಷ್ಕರಿಸಬೇಕು’ ಎಂದು ಕರವೇ ಮುಖಂಡರು ಬುಧವಾರ ಆಗ್ರಹಿಸಿದರು.
‘ನಟ ಕಮಲ್ ಹಾಸನ್ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಮುಂಬರುವ ಅವರ ಚಿತ್ರ ಥಂಗ್ ಲೈಫ್ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು’ ಎಂದು ಮುಖ್ಯಮಂತ್ರಿಗೆ ಬರೆದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಆಂಜನೇಯ ಭಂಡಾರಿ, ಕುರುಮೇಶ ನಾಯಕ, ಅಶೋಕ ನಾಯಕ, ಭೀಮೇಶ ನಾಯಕ, ಸಲೀಂಖಾನ್, ಶಿವು ಪತ್ತಾರ, ಸಿದ್ದು ಛಲವಾದಿ, ವಿಜಯಕುಮಾರ, ಅಭಿಷೇಕ ನಾಯಕ, ಮುತ್ತುರಾಜ, ಪ್ರಸನ್ನ ನಾಯಕ ಹಾಗೂ ನಾಗರಾಜ ಗುತ್ತೇದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.