ADVERTISEMENT

‘ಕಂಚಿನ ತಟ್ಟೆಯ ಫುಟ್‌ ಥೆರಪಿಯಿಂದ ಆರೋಗ್ಯ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:23 IST
Last Updated 24 ಸೆಪ್ಟೆಂಬರ್ 2024, 14:23 IST

ರಾಯಚೂರು: ‘ಕಂಚಿನ ತಟ್ಟೆಯ ಫುಟ್‌ ಥೆರಪಿಯಿಂದ ಕೆಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎಂದು ಸಂಗೀತ ಉಪನ್ಯಾಸಕಿ ಸತ್ಯವತಿ ದೇಶಪಾಂಡೆ ತಿಳಿಸಿದರು.

ದೇಸಿ ತಂತ್ರಜ್ಞಾನ ಬಳಸಿ ಫೀಟ್‌ ವೇದಾ ಫುಟ್‌ ಮಸಾಜ್‌ ಯಂತ್ರ ಸಿದ್ಧಪಡಿಸಿದೆ. ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಕನಿಷ್ಠ 10 ನಿಮಿಷ ಬಳಕೆ ಮಾಡಿದರೆ ದೇಹದ ಮೇಲೆ ಆಗುವ ಸಕಾರಾತ್ಮಕ ಪರಿಣಾಮಗಳು ಅರಿವಿಗೆ ಬರಲಿವೆ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಥೆರಪಿಯಿಂದ ರಕ್ತ ಪರಿಚಲನೆ ಉತ್ತಮಗೊಳ್ಳಲಿದೆ. ದೃಷ್ಟಿ ಸಮಸ್ಯೆಗೆ ಪರಿಹಾರ ದೊರಕಲಿದೆ. ಚರ್ಮದ ಕಾಂತಿ ಹೆಚ್ಚಾಗಲಿದೆ. ಹೊಟ್ಟೆ, ಕೀಲು, ಮಂಡಿ ನೋವು ಕಡಿಮೆಯಾಗುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.