ಹಟ್ಟಿ ಚಿನ್ನದ ಗಣಿ: ಲಿಂಗಸುಗೂರಿನಿಂದ ಗುಡದನಾಳ ಮಾರ್ಗವಾಗಿ ಹಟ್ಟಿಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನ ಬ್ರೇಕ್ ಫೇಲಾಗಿ ಸುಮಾರು ದೂರ ಸಾಗಿದ್ದು, ಭಾರಿ ಅನಾಹುತ ತಪ್ಪಿದೆ.
ಶನಿವಾರ ರಾತ್ರಿ ಗುಡದನಾಳ ಹತ್ತಿರ ಬಸ್‌ನ ಬ್ರೇಕ್ ಫೇಲಾದ ವಿಷಯ ತಿಳಿದ ಪ್ರಯಾಣಿಕರು ಗಾಬರಿಗೊಂಡು ಚೀರುತ್ತ ಕಾಪಾಡಿ ಎಂದು ಕೂಗಿದ್ದಾರೆ. ಗ್ರಾಮಸ್ಥರು ಬಸ್‌ನ ಹಿಂದೆ ಓಡಿ ಹೋಗಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಚಾಲಕ ರಸ್ತೆ ಬದಿ ಹಾಕಿದ್ದ ಮರಗಳಿಗೆ ಡಿಕ್ಕಿ ಹೊಡೆಸಿ ಬಸ್ ಅನ್ನು ನಿಯಂತ್ರಿಸಿದ್ದಾರೆ.
ಗುಡದನಾಳ–ಹಟ್ಟಿ ರಸ್ತೆ ಹಾಳಾಗಿರುವುದೇ ಬ್ರೇಕ್ ಫೇಲಾಗಲು ಕಾರಣ. ಅಲ್ಲದೆ, ಗುಜರಿಗೆ ಹಾಕಬೇಕಾದ ಬಸ್‌ಗಳನ್ನು ಓಡಿಸಲಾಗುತ್ತಿದೆ. ಈ ಮೂಲಕ ಕೆಕೆಆರ್‌ಟಿಸಿ ಅಧಿಕಾರಿಗಳು ಜನರ ಜೀವದ ಜತೆ ಆಟವಾಡುತ್ತಿದ್ದಾರೆ ಎಂದು ಶರಣುಬಸವ ಕಟ್ಟಿಮನಿ, ಅಮರೇಶ ರಾಗೇರಿ, ಗುಂಡಪ್ಪ ಉಪ್ಪೇರಿ, ಶೀಲವಂತ ಯಾದಗಿರಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.