ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೈದರಾಬಾದ್, ಬೆಂಗಳೂರು ಹಾಗು ವಿವಿಧ ಭಾಗಗಳಿಂದ ಹಲವಾರು ಭಾಷಣಕಾರರು ಆಗಮಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಮಹಿಳಾ ಹೋರಾಟಗಾರರಾದ ನಯ್ಯಬ್ ತಯ್ಯಬಾ ಹಾಗೂ ಸಲ್ಮಾ ಬೇಗಂ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ವಿರೋಧಿಸಿ ಹಲವೆಡೆ ಹೋರಾಟ ನಡೆಯುತ್ತಿವೆ. ರಾಯಚೂರಿನಲ್ಲಿಯೂ ಕಳೆದ ಜನವರಿ 26ರಿಂದ ಹೋರಾಟ ನಡೆಯುತ್ತಿದೆ. ಅನೇಕ ಪ್ರಗತಿಪರರರು ಬೆಂಬಲ ನೀಡುತ್ತಿದ್ದು, ಹೈದರಾಬಾದ್‌ನಿಂದ ನಾಸಿರಾ ಖಾನಂ, ವಿಮ್ಲಾ, ಖಾಲಿದಾ ಪರ್ವೀನ್, ಅಂಜುಮ್ ರಝ್ವಿ ಹಾಗೂ ವಿದ್ಯಾರ್ಥಿ ಸಂಘಟನೆಯ ನಜ್ಮಾ ನಜೀರ್ ಆಗಮಿಸುವರು ಎಂದರು.
ಕಾರ್ಮಿಕರು, ಹೋರಾಟಗಾರರು, ಪ್ರಗತಿಪರ ಚಿಂತಕರು ಭಾಗವಹಿಸಬೇಕು ಎಂದು ಕೋರಿದರು. ಹೋರಾಟಗಾರರಾದ ಜಿ.ಅಮರೇಶ, ಖಾಜಾ ಅಸ್ಲಂ ಪಾಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.