ADVERTISEMENT

ಜಾಲಹಳ್ಳಿ: ಚಿರತೆ ದಾಳಿಗೆ ಆಕಳ ಕರು ಬಲಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 4:12 IST
Last Updated 4 ಮಾರ್ಚ್ 2024, 4:12 IST
<div class="paragraphs"><p>ಚಿರತೆಯ ಹೆಜ್ಜೆ ಗುರುತು.</p><p></p></div>

ಚಿರತೆಯ ಹೆಜ್ಜೆ ಗುರುತು.

   

ಜಾಲಹಳ್ಳಿ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಿಂದ ಎರಡು ಕಿ.ಮೀ ಅಂತರದಲ್ಲಿರುವ ತೋಟದಲ್ಲಿ ಭಾನುವಾರ ರಾತ್ರಿ‌ ಆಕಳ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.

ADVERTISEMENT

ರೈತ ಮುದ್ದರಂಗಪ್ಪ ತೆಗ್ಗೆಳ್ಳಿ ಅವರು ತಮ್ಮ ಲಿಂಬೆ ಹಣ್ಣು ತೋಟದ ಮನೆಯ ಮುಂದೆ ಒಂದು ಎಮ್ಮೆ ಹಾಗೂ ಆಕಳ ಕರು ಕಟ್ಟಿದ್ದರು. ಚಿರತೆ, ಕರುವನ್ನು ಕೊಂದು ಪೊದೆಯಲ್ಲಿ ಎಳೆದೊಯ್ದು ತಿಂದಿದೆ. ಮುದ್ದರಂಗಪ್ಪ ಬೆಳಿಗ್ಗೆ ಜಾನುವಾರಿಗೆ ಮೇವು ಹಾಕಲು ಬಂದಾಗ ಕರು ಸತ್ತಿರುವುದು ಕಂಡು ಬಂದಿದೆ. ತೋಟದ ಸುತ್ತಲೂ ಅರಣ್ಯ ಇಲಾಖೆ ಸೇರಿದ ಸುಮಾರು 700ಎಕರೆ ಪ್ರದೇಶದಲ್ಲಿ ಕುರುಚಲು ಕಾಡಿದೆ. ಈ ಅರಣ್ಯದ ಮೂಲಕ ಆಹಾರ ಅರಿಸಿ ಬಂದು ಜಾನುವಾರು ಮೇಲೆ ದಾಳಿ ಇಟ್ಟಿದೆ.

ತಿಮ್ಮಪ್ಪ ಬೆಟ್ಟ ಸುತ್ತಲೂ ಕರಡಿಗುಡ್ಡ, ಪರಪುರ, ಮುಕ್ಕನಾಳ, ಗ್ರಾಮಗಳು ಇವೆ. ಗ್ರಾಮಸ್ಥರು ಇಲ್ಲಿ ದನ, ಕುರಿ ಮೇಕೆ ಮೇಯಿಸುತ್ತಾರೆ. ಚಿರತೆ ದಾಳಿಯಿಂದಾಗಿ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಸೋಮವಾರ ಬೆಳ್ಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.