ADVERTISEMENT

ಜಾಲಹಳ್ಳಿ: ಡ್ರೋನ್ ಕ್ಯಾಮರಾ ಮೂಲಕ ಗಾಂಜಾ ಪತ್ತೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 14:25 IST
Last Updated 10 ಫೆಬ್ರುವರಿ 2024, 14:25 IST
ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಡ್ರೋನ್ ಕ್ಯಾಮರಾ ದಿಂದ ರೈತರ ಬೆಳೆಗಳ ಮದ್ಯೆ ಯಾರದರೂ ಗಾಂಜಾ ಬೆಳೆದಿದ್ದಾರೆಯೇ ಎನ್ನುವುದನ್ನು ಸೆರೆಹಿಡಿಯಲಾಗಿದೆ.
ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಡ್ರೋನ್ ಕ್ಯಾಮರಾ ದಿಂದ ರೈತರ ಬೆಳೆಗಳ ಮದ್ಯೆ ಯಾರದರೂ ಗಾಂಜಾ ಬೆಳೆದಿದ್ದಾರೆಯೇ ಎನ್ನುವುದನ್ನು ಸೆರೆಹಿಡಿಯಲಾಗಿದೆ.   

ಜಾಲಹಳ್ಳಿ: ಸ್ಥಳೀಯ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸುಜಾತಾ ನಾಯಕ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಮಲ್ಲಾಪುರ, ಬೋಮನಗುಂಡ, ಗಣೇಕಲ್, ಅಲ್ಕೋಡ್, ಬಿ. ಆರ್‌ ಗುಂಡ, ಮೂಡಲಗುಂಡ, ಹುಲಿಗುಡ್ಡ, ಸಮುದ್ರ, ಪಂದ್ಯಾನ, ಬುಂಕಲದೊಡ್ಡಿ ಗ್ರಾಮಗಳಲ್ಲಿ ರೈತರು ಬೆಳೆದ ವಿವಿಧ ಬೆಳೆಗಳ ಡ್ರೋಣ್‌ ಮೂಲಕ ಗಾಂಜಾ ಪತ್ತೆ ಮತ್ತು ಚಿತ್ರ ಸಂಗ್ರಹ ಕಾರ್ಯ ನಡೆಯಿತು.

ಬೆಳಗೆಳ ನಡುವೆ ಗಾಂಜಾ‌ ಸಸಿ ನಾಟಿ‌ ಮಾಡಿರಬಹುದು ಎನ್ನುವ ಅನುಮಾನ ಇದ್ದಲ್ಲಿ ಡ್ರೋನ್ ಕ್ಯಾಮರಾ ಮೂಲಕ ವಿಡಿಯೊ ಹಾಗೂ ಪೋಟೊಗಳನ್ನು ಸಂಗ್ರಹ ಮಾಡಲಾಯಿತು ಎಂದು ಪಿಎಸ್ಐ ಸುಜಾತಾ ನಾಯಕ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅದೇಶದ ಮೇರೆಗೆ ಕೆಲಸ ಕೈಗೊಳ್ಳಲಾಗಿದ್ದು ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರ ಕೆಲಸಕ್ಕೆ‌ ಕೈ ಹಾಕುತ್ತಾರೆ. ನಮ್ಮ ಇಲಾಖೆಗೆ ಎಲ್ಲಿ ಅಕ್ರಮ ನಡೆಯುತ್ತದೆ, ನಡೆಯುತ್ತದೆ ಎನ್ನುವ ಬಗ್ಗೆ ಮಾಹಿತಿ ಇರುತ್ತದೆ. ಕೃಷಿ ಜಮೀನುಗಳಲ್ಲಿ ನಿಷೇಧಿತ ಬೆಳೆಗಳನ್ನು ಬೆಳೆದು ಬಾರದು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.