ADVERTISEMENT

ಮಾದಕ ದ್ರವ್ಯ ವ್ಯಸನದಿಂದ ದೂರವಿರಿ: ಲಕ್ಷ್ಮೀ ಎಂ.ನಾಯಕ ಸಲಹೆ

ಅಬಕಾರಿ ಇಲಾಖೆಯ ಉಪ ಆಯುಕ್ತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 15:38 IST
Last Updated 17 ಜೂನ್ 2022, 15:38 IST
ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ಸಿ.ಎಚ್ ಮಿಶ್ರಿತ ಕಲಬೆರಕೆ ಸೇಂಧಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಅಬಕಾರಿ ಇಲಾಖೆಯ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ಉದ್ಘಾಟಿಸಿ ಮಾತನಾಡಿದರು.
ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ಸಿ.ಎಚ್ ಮಿಶ್ರಿತ ಕಲಬೆರಕೆ ಸೇಂಧಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಅಬಕಾರಿ ಇಲಾಖೆಯ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ಉದ್ಘಾಟಿಸಿ ಮಾತನಾಡಿದರು.   

ರಾಯಚೂರು: ಸಿಎಚ್ ಪೌಡರ್ (ಕ್ಲೋರಲ್ ಹೈಡ್ರೈಟ್) ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತಿದ್ದು, ಜಿಲ್ಲೆಯಲ್ಲಿ ಸಿಎಚ್ ಪೌಡರ್ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಮಾದಕ ವ್ಯಸನದಿಂದ ದೂರವಿರಿ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ಹೇಳಿದರು.

ನಗರದ ಹರಿಜನವಾಡ ಬಡಾವಣೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ಸಿ.ಎಚ್ ಮಿಶ್ರಿತ ಕಲಬೆರಕೆ ಸೇಂಧಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ಹಾಗೂ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿಎಚ್ ಪೌಡರ್ ಮಿಶ್ರಿತ ಕಲಬೆರಕೆ ಸೇಂಧಿ ಸೇವನೆಯಿಂದಾಗಿ ಲೀವರ್ ವಿಫಲತೆಗೆ ಕಾರಣವಾಗುತ್ತದೆ. ಕಣ್ಣಿನ ಪೊರೆ ನಾಶಕ್ಕೆ ಕಾರಣವಾಗಿ ಅಂಧತ್ವ ಬರುತ್ತದೆ. ಅಲ್ಲದೆ ಇನ್ನು ಹೃದಯಾಘಾತ ಹಾಗೂ ಜೀರ್ಣ ಶಕ್ತಿಯನ್ನು ಕಡಿಮೆ ಮಾಡುವುದು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ಇತರ ಗಾಢವಾದ ಪರಿಣಾಮ ಬೀರುತ್ತದೆ ಎಂದರು.

ADVERTISEMENT

ನಾಡಿನಲ್ಲಿ ಈ ವಸ್ತುವನ್ನು ಮಾದಕ ದ್ರವ್ಯವಾಗಿ ದುರ್ಬಳಕೆ ಮಾಡುತ್ತಿರುವುದು ಅತ್ಯಂತ ಖೇದಕರ, ಸಾರ್ವಜನಿಕರು ಈ ಸಿ.ಎಚ್. ಪೌಡರ್‌ನಿಂದಾಗುವ ದುಷ್ಪರಿಣಾಮಗಳಾದ ಲಿವರ್, ಕಿಡ್ನಿ, ಹೃದಯ ಹಾಗೂ ಮೆದುಳಿನ ಮೇಲಿನ ಅತ್ಯಂತ ಘೋರ ಪರಿಣಾಮಗಳಿಂದ ಮನುಷ್ಯ ಸಾಕಷ್ಟು ಸಾವು ನೋವುಗಳನ್ನು ಅನುಭವಿಸುತ್ತಾನೆ. ಆದ್ದರಿಂದ ಈ ಬಗ್ಗೆ ತಿಳುವಳಿಕೆ ಹೊಂದಿ ಈ ಮಾದಕ ದ್ರವ್ಯದ ವ್ಯಸನದಿಂದ ದೂರ ಇರುವ ಮೂಲಕ ಆರೋಗ್ಯವಂತ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.

ನಿಷೇಧಿತ ಸಿಹೆಚ್ ಪೌಡರ್ ಮಿಶ್ರಣ ಮಾಡಿ ಅತೀ ಕಡಿಮೆ ದರಕ್ಕೆ ಹೆಚ್ಚಾಗಿ ಕಾರ್ಮಿಕ ವರ್ಗದ ಜನರನ್ನೇ ಟಾರ್ಗೆಟ್ ಸೇಂದಿ ಮಾರಾಟ ಮಾಡುತ್ತಿದ್ದು, ಈ ಕುರಿತು ಹಲವು ಪ್ರಕರಣ ದಾಖಲಾಗಿದ್ದು, ಸಿಎಚ್ ಪೌಡರ್ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆಯ ವತಿಯಿಂದ ದಿನದ 24ಗಂಟೆಯು ಕಾರ್ಯನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಂಪರ್ಕ ಹೊಂದಬಹುದಾಗಿದೆ ಎಂದರು.

ಮಾನಸಿಕ ಆರೋಗ್ಯ ತಜ್ಞ ಡಾ.ಮನೋಹರ ಪತ್ತಾರ ಮಾತನಾಡಿ, ಕೈಹೆಂಡ ಸೇವನೆ ದಿನಕಳೆದಂತೆ ಹೆಚ್ಚು ಮಾಡುವುದು, ಕೈನಡುಕ, ಗಾಬರಿ, ತಲೆನೋವು, ಇತ್ಯಾದಿ ಕಾಣಿಸುವುದು ವ್ಯಸನದ ಲಕ್ಷಣಗಳಾಗಿವೆ. ಸಿಎಚ್ ಪೌಡರ್ ಅಥವಾ ಕೈ ಹೆಂಡ ಸೇವೆ ತ್ಯಜಿಸಲು ಹತ್ತಿರದ ಆಪ್ತ ಸಮಾಲೋಚನೆ, ಔಷಧಿಗಳು, ಧ್ಯಾನ, ಯೋಗ ಇತ್ಯಾದಿ ಸೂಕ್ತ ಚಿಕಿತ್ಸೆಗಳು ಲಭ್ಯವಿದೆ ಎಂದರು.

ನಗರಸಭೆಯ ಸದಸ್ಯರಾದ ಹೇಮಲತಾ ಬೂದೆಪ್ಪ, ನರಸಮ್ಮ ಗಂಡ ನರಸಿಂಹಲು, ನಾಗರಾಜ, ಎಸ್.ರಾಜು, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಜಿಲ್ಲಾ ಕೋಷ್ಠರೋಗ ಅನುಷ್ಠಾನ ಅಧಿಕಾರಿ ಡಾ.ಯಶೋದಾ ಎನ್., ಅಬಕಾರಿ ಉಪ ಅಧೀಕ್ಷ ಶ್ರೀಹರಿಕೃಷ ಸೇರಿದಂತೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.