ADVERTISEMENT

ಲಿಂಗಸುಗೂರು | ತೂಕದಲ್ಲಿ ಮೋಸ: ವರ್ತಕರ ಮೇಲೆ ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 14:25 IST
Last Updated 26 ಡಿಸೆಂಬರ್ 2023, 14:25 IST
ಲಿಂಗಸುಗೂರಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹಟ್ಟಿ ಪಟ್ಟಣದ ವರ್ತಕರು ರೈತರ ಮಾಲು ಖರೀದಿಸುವಾಗ ತೂಕದಲ್ಲಿ ಮೋಸ ಮಾಡುತ್ತಿರುವ ಕುರಿತು ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಅವರಿಗೆ ಮನವಿ ಸಲ್ಲಿಸಿದರು.
ಲಿಂಗಸುಗೂರಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹಟ್ಟಿ ಪಟ್ಟಣದ ವರ್ತಕರು ರೈತರ ಮಾಲು ಖರೀದಿಸುವಾಗ ತೂಕದಲ್ಲಿ ಮೋಸ ಮಾಡುತ್ತಿರುವ ಕುರಿತು ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಅವರಿಗೆ ಮನವಿ ಸಲ್ಲಿಸಿದರು.   

ಲಿಂಗಸುಗೂರು: ತಾಲ್ಲೂಕಿನ ಹಟ್ಟಿ ಪಟ್ಟಣದ ಕೃಷಿ ಉತ್ಪನ್ನ ಖರೀದಿದಾರ ವರ್ತಕರು, ರೈತರು ಮಳಿಗೆಗಳಿಗೆ ತರುವ ಮಾಲು ಖರೀದಿಸುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ತೂಕದಲ್ಲಿ ಮೋಸ ಮಾಡುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಂಡು ರೈತ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಮಂಗಳವಾರ ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍ ಅವರಿಗೆ ದೂರು ಸಲ್ಲಿಸಿ, ಈಗಾಗಲೇ ಹಲವು ಬಾರಿ ಹಟ್ಟಿ ಪಟ್ಟಣದ ಕಮಿಷನ್‍ ಏಜೆಂಟ್‍ ಲೈಸೆನ್ಸ್‌ದಾರರು ರೈತರ ಮಾಲು ಖರೀದಿಸುವ ತೂಕದಲ್ಲಿನ ಮೋಸ, ಹೆಚ್ಚುವರಿ ಕಮಿಷನ್‍ ಮುರಿತ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದೆ. ಈ ವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ತಾಲ್ಲೂಕು ಘಟಕ ಅಧ್ಯಕ್ಷ ಮಲ್ಲಣ್ಣ ಗೌಡೂರು, ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡನಭಾವಿ. ಮುಖಂಡರಾದ ಅಮರಪ್ಪ ಅರಳಳ್ಳಿ, ಶಿವಪುತ್ರಪ್ಪ ಹಟ್ಟಿ, ಬಾಬು ನಾಯಿಕೊಡಿ, ಬಾಗನಗೌಡ, ಷಣ್ಮುಖಯ್ಯಸ್ವಾಮಿ, ಬಾಲದಂಡಪ್ಪ ನಾಯಕ, ಮಹಿಬೂಬ, ಯಂಕಪ್ಪ ಕ್ವಾಟಿ, ಮಂಜುನಾಥ ಬಡಿಗೇರ, ಶೌಕತ್‍, ಗಂಗಾಧರ ನೆಲೊಗಿ, ಲಿಂಗಪ್ಪ ಮಲ್ಲಾಪುರ, ರಮೇಶ ಮಸ್ಕಿ, ಶ್ರೀನಿವಾಸ ಸ್ವಾಮಿ, ದೇವಪ್ಪ, ಶಂಭುನಾಥ ತವಗ ನೇತೃತ್ವ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.