
ರಾಯಚೂರು: ಜೀವ ವಿರೋಧಿ ಹಾಗೂ ಪರಿಸರ ವಿರೋಧಿ ವಿನಾಶಕಾರಿಯಾದ ಅಣು ವಿದ್ಯುತ್ ಸ್ಥಾವರ ಘಟಕವನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲೇಬಾರದು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸದಸ್ಯರು ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಆಡಳಿತವಾಗಲಿ ಆರ್‌ಟಿಪಿಎಸ್ ನ ಅಧಿಕಾರಿಗಳಾಗಲಿ ಅಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಹಂತದಲ್ಲಿಯೇ ಯಾವುದೇ ಅಧಿಕಾರಿಗಳಿಗೆ ಸ್ಥಳ ವೀಕ್ಷಣೆಗೆ ಅವಕಾಶ ನೀಡಬಾರದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸ್ವೀಕರಿಸಿ, ‘ ರಾಯಚೂರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಸವರಾಜ್ ಕಳಸ ,ಎಸ್. ಮಾರಪ್ಪ, ಅಶೋಕಕುಮಾರ ಜೈನ್, ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ್, ಪ್ರಭಾಕರ, ಆರ್‌ಟಿಪಿಎಸ್ ನ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನೆ ,ವಕೀಲರ ಸಂಘದ ಉಪಾಧ್ಯಕ್ಷ ನಜೀರ್ ಅಹ್ಮದ್ ಶೇರ್ ಅಲಿ, ಅನಿತಾ ನವಲ್ಕಲ್, ನಿವೇದಿತ , ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯರಾಜೇಂದ್ರ, ವೀರೇಶ್, ಚನ್ನಬಸವ ಜಾನೇಕಲ್, ಸಿಂಧನೂರಿನ ಚಂದ್ರಶೇಖರ ಗೊರೆಬಾಳ್, ಕೊಪ್ಪಳದ ಡಿ. ಎಚ್. ಪೂಜಾರ್, ಬಾಬು ಬಂಡಾರಿಗಲ್, ಆಂಜನೇಯ ಜಾಲಿಬೆಂಚಿ, ಸಿಪಿಐಎಂ ನ ಕೆ.ಜಿ ವೀರೇಶ್, ಹೆಚ್. ಪದ್ಮ, ಅಮರೇಗೌಡ ಪಾಟೀಲ, ಜಗದೀಶ್ ಪೂರ ತಿಪ್ಪಲಿ, ಎಸ್. ಹನುಮಂತಪ್ಪ, ವೆಂಕಟರೆಡ್ಡಿ ದಿನ್ನಿ ,ಪ್ರಸನ್ನ ಆಲಮ್ಪಲ್ಲಿ, ಶ್ರೀನಿವಾಸ್ ಕಲವಲ ದೊಡ್ಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.