ರಾಯಚೂರು: ‘ಲಿಂಗಸುಗೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಯಾವುದೇ ಜಾಗವನ್ನು ಅತಿಕ್ರಮಣ ಮಾಡಿಲ್ಲ‘ ಎಂದು ವಕೀಲ ವೀರಗುಂಡಯ್ಯಸ್ವಾಮಿ ತಿಳಿಸಿದ್ದಾರೆ.
‘ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ರಾಯಚೂರಿನ ಪ್ರಧಾನ ಸಿವಿಲ್ ನ್ಯಾಯಾಲಯ 25 ಏಪ್ರಿಲ್ 2009ರಂದು ಅಂತಿಮ ತೀರ್ಪು ನೀಡಿದೆ. ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಅಸ್ಕಿಹಾಳ ಗೇಟ್ ಹಿರೇಮಠದ ರಸ್ತೆಯಂದು ತೀರ್ಪು ನೀಡಿದೆ. ರಾಯಚೂರು ತಹಶೀಲ್ದಾರರು ಸಹ ಅಧಿಕೃತ ಸ್ವಾಧಿನದಾರರೆಂದು ಒಪ್ಪಿದ್ದಾರೆ‘ ಎಂದು ಹೇಳಿದ್ದಾರೆ.
‘2024ರ ಫೆಬ್ರುವರಿ 19ರಂದು ಪ್ರಜಾವಾಣಿಯಲ್ಲಿ ‘ದೇವರು, ಮಠ ಹೆಸರಲ್ಲಿ ಶಾಲಾ ಕಾಲೇಜು ಜಾಗ ಅತಿಕ್ರಮಣ‘ ಶೀರ್ಷಿಕೆ ಅಡಿಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಪದವಿ ಕಾಲೇಜಿನ ಸಿಬ್ಬಂದಿ ಪತ್ರಿಕೆಗೆ ನೀಡಿದ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನಾವು ಕಾಲೇಜಿನ ಯಾವುದೇ ಜಾಗ ಒತ್ತುವರಿ ಮಾಡಿಲ್ಲ. 2018 ರಲ್ಲಿ ಮಠದ ಜಾಗದಲ್ಲಿ ಅಕ್ರಮವಾಗಿ ಆವರಣ ಗೋಡೆ ನಿರ್ಮಿಸಲು ಬಂದಾಗ ನಾನೇ ಅವರ ವಿರುದ್ಧ ದೂರು ಕೊಟ್ಟಿದ್ದೆ. ನಂತರ ಲೋಕೋಪಯೋಗಿ ಇಲಾಖೆಯವರು ಕಾಮಗಾರಿಯ ಟೆಂಡರ್ ರದ್ದುಪಡಿಸಿದರು‘ ಎಂದು ತಿಳಿಸಿದ್ದಾರೆ.
‘ರಾಯಚೂರು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು 2011ರ ಏಪ್ರಿಲ್ 12ರಂದು ನಮ್ಮ ಮನೆ ಹಾಗೂ ಮಠ ತೆರವುಗೊಳಿಸಿದ್ದಕ್ಕೆ ತನಿಖೆ ನಡೆಸಿ ವರದಿ ನೀಡುವಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಸೂಚಿಸಿದ್ದಾರೆ. ಇಂದಿಗೂ ಸಂಬಂಧಿಸಿದ ಅಧಿಕಾರಿಗಳು ತನಿಖೆ ಮಾಡಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.