ADVERTISEMENT

ಸಿಂಧನೂರು: ಮಕ್ಕಳಿಂದ ವೈದ್ಯರಿಗೆ ಅಭಿನಂದನೆ 

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:40 IST
Last Updated 4 ಜುಲೈ 2025, 13:40 IST
ಸಿಂಧನೂರಿನ ಪಾಟೀಲ ಪ್ರಿ ಪ್ರೀಮಿಯರ್ ಶಾಲಾ ಮಕ್ಕಳು ವೈದ್ಯರ ದಿನಾಚರಣೆಯ ಪ್ರಯುಕ್ತ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಚೇತನ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರಿಗೆ ಅಭಿನಂದಿಸಿದರು
ಸಿಂಧನೂರಿನ ಪಾಟೀಲ ಪ್ರಿ ಪ್ರೀಮಿಯರ್ ಶಾಲಾ ಮಕ್ಕಳು ವೈದ್ಯರ ದಿನಾಚರಣೆಯ ಪ್ರಯುಕ್ತ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಚೇತನ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರಿಗೆ ಅಭಿನಂದಿಸಿದರು   

ಸಿಂಧನೂರು: ವೈದ್ಯರ ದಿನಾಚರಣೆ ಪ್ರಯುಕ್ತ ನಗರದ ಪಾಟೀಲ ಶಿಕ್ಷಣ ಸಂಸ್ಥೆಯ ಪಾಟೀಲ ಪ್ರಿ ಪ್ರೀಮಿಯರ್ ಶಾಲಾ ಮಕ್ಕಳು ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಚೇತನ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆ ಸಲ್ಲಿಸಿದರು.

ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯ ಡಾ.ನಾಗರಾಜ ಮಾಲಿ ಪಾಟೀಲ ಹಾಗೂ ಮಕ್ಕಳ ತಜ್ಞೆ ಡಾ.ಸವಿತಾ ಮಾಲಿ ಪಾಟೀಲ ಅವರಿಗೆ ಗುಲಾಬಿ ಹೂ ನೀಡಿ ಮಕ್ಕಳು ಅಭಿನಂದಿಸಿದ್ದು ವಿಶೇಷವಾಗಿತ್ತು.

ಅಭಿನಂದನೆ ಸ್ವೀಕರಿಸಿದ ವೈದ್ಯರು ಮಕ್ಕಳಿಗೆ ಸಿಹಿ ವಿತರಿಸಿದರು.

ADVERTISEMENT

ನಂತರ ಶಿಕ್ಷಣ ಸಂಸ್ಥೆಯಿಂದ ವೈದ್ಯ ದಂಪತಿಯನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.