ADVERTISEMENT

ಲಿಂಗಸುಗೂರು: ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:32 IST
Last Updated 11 ನವೆಂಬರ್ 2025, 6:32 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಲಿಂಗಸುಗೂರು: ‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ವಿರುದ್ಧ ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವಕ್ರಾಂತಿ ಗೆಜ್ಜಲಗಟ್ಟಾ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೋವಿಂದ ನಾಯಕ ಅವರನ್ನು ಬೆಳಕಿಗೆ ತಂದವರು ಶಾಸಕ ಮಾನಪ್ಪ ವಜ್ಜಲ ಎಂಬ ಬಿಜೆಪಿ ಮುಖಂಡರ ಆರೋಪ ಖಂಡನೀಯ. 1999ರಲ್ಲಿ ರಾಜಾ ಅಮರೇಶ್ವರ ನಾಯಕ ಅವರು ಸ್ಪರ್ಧಿಸಿದ್ದ ಕಲ್ಮಲಾ ಕ್ಷೇತ್ರದಲ್ಲಿ ಗೋವಿಂದ ನಾಯಕ ಮುಂದಾಳತ್ವ ಹೊಂದಿದ್ದರು. ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾಗಿದ್ದರು. ಮೂರು ಅವಧಿಗೆ ಗುರುಗುಂಟಾ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿದ್ದರು. ತಾಲ್ಲೂಕಿನಾದ್ಯಂತ ಚಿರಪರಿಚಿತರಾಗಿದ್ದನ್ನು 2008ರಲ್ಲಿ ಗಮನಿಸಿದ ಮಾನಪ್ಪ ವಜ್ಜಲ್ ಅವರು, ನಾಯಕ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಮಾನಪ್ಪ ವಜ್ಜಲ್ ಎರಡು ಬಾರಿ ಶಾಸಕರಾಗಲು ಗೋವಿಂದ ನಾಯಕ ಅವರ ಶ್ರಮವಿದೆ ಎಂಬುದನ್ನು ಬಿಜೆಪಿ ಮುಖಂಡರು ಮರೆಯಬಾರದು. ಅವರ ಬಗ್ಗೆ ತಿಳಿದುಕೊಳ್ಳದೇ ಏಕವಚನದಲ್ಲಿ ಆರೋಪಿಸುವುದು ಸರಿಯಲ್ಲ’ ಎಂದರು.

ADVERTISEMENT

‘ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸುಟ್ಟು ಹಾಕಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದ್ದಾರೆ. ವಜ್ಜಲ ಅವರಿಗೆ ಬಡವರ ಏಳಿಗೆ ಸಹಿಸಲಾಗುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಅವರು ರಾಹುಲ್ ಗಾಂಧಿಗೆ ಮತಿಭ್ರಮಣೆಯಾಗಿದೆ ಎಂದು ಹೇಳಿರುವುದು ಅವರ ಪಕ್ಷದ ಸಂಸ್ಕಾರ. ದೊಡ್ಡವರನ್ನು ಟೀಕಿಸಿ ದೊಡ್ಡವರಾಗಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಯೋಜನೆಗಳ ಬಗ್ಗೆ ಟೀಕೆ ಮಾಡುವುದು ಬಿಟ್ಟು ಶಾಸಕರು ತಾಲ್ಲೂಕಿನ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೀವನಗೌಡ ಕರಡಕಲ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಸಂಗಮೇಶ ನಾಯಕ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಖಾಜಾಹುಸೇನ್ ಪೂಲವಾಲೆ, ಗಂಗಾಧರ ನೀರಲಕೇರಿ, ವೆಂಕಟೇಶ ರಾಠೋಡ, ಶರಣಪ್ಪ ಕಟಗಿ, ಪಂಪಾಪತಿ ಪರಂಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.