ADVERTISEMENT

‍ಮತಕಳ್ಳತನದಿಂದಲೇ ಕಾಂಗ್ರೆಸ್‌ಗೆ 136 ಸ್ಥಾನ: ಎಚ್.ವಿ.ಪವಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:07 IST
Last Updated 8 ನವೆಂಬರ್ 2025, 6:07 IST
ಎಚ್.ವಿ.ಪವಾರ್
ಎಚ್.ವಿ.ಪವಾರ್   

ಲಿಂಗಸುಗೂರು: ‘ಮತಕಳ್ಳತನದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳಲ್ಲಿ ಗೆದ್ದಿದೆ’ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪವಾರ್ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮತಕಳ್ಳತನದಿಂದಲೇ ಮಾನಪ್ಪ ವಜ್ಜಲ್ ಶಾಸಕರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಹೇಳಿಕೆ ನೀಡಿರುವುದು ಖಂಡನೀಯ. ಮಾಜಿ ಶಾಸಕರನ್ನು ಮೆಚ್ಚಿಸಲು ಗೋವಿಂದ ನಾಯಕ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ತಮ್ಮನ್ನು ಬೆಳಕಿಗೆ ತಂದವರೇ ಮಾನಪ್ಪ ವಜ್ಜಲ್ ಎಂಬುದನ್ನು ಗೋವಿಂದ ನಾಯಕರು ಮರೆಯಬಾರದು. ಅಧಿಕಾರದ ಅಮಲಿನಲ್ಲಿರುವ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಮತಕಳ್ಳತನ ಬಿಜೆಪಿ ಸಂಸ್ಕೃತಿಯಲ್ಲ. ಅದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಇಲ್ಲದೆ ರೈತರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಗ್ಯಾರಂಟಿ ಯೋಜನೆಗಳಿಂದ ಯಾವುದೇ ನೇಮಕಾತಿ ಇಲ್ಲದೆ ಲಕ್ಷಾಂತರ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದರ ಬಗ್ಗೆ ಮೊದಲು ಮಾತನಾಡಬೇಕು. ಮಾನಪ್ಪ ವಜ್ಜಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಡಬೇಕು’ ಎಂದರು.

ಬಿಜೆಪಿ ಎಸ್‌.ಸಿ ಮೋರ್ಚಾ ಅಧ್ಯಕ್ಷ ಅಮರೇಶ ಭೋವಿ, ಎಸ್‌.ಟಿ ಮೋರ್ಚಾ ಅಧ್ಯಕ್ಷ ರಾಮಲಿಂಗ ನಾಯಕ, ಬಸವರಾಜ ಕಾಟಗಲ್, ವೀರನಗೌಡ ಮಾವಿನಭಾವಿ ಹಾಗೂ ಹನುಮಂತ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.