
ರಾಯಚೂರು: ‘ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಹತ್ತಿ ಮಾರಾಟ ಮಾಡಲು ‘ಕಪಾಸ್ ಕಿಸಾನ್’ ಮೊಬೈಲ್ ಅಪ್ಲೀಕೇಶನ್ ಮೂಲಕ ನೋಂದಾಯಿಸಿಕೊಳ್ಳಲು ಅ.31ರವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ.
ಪಹಣಿ, ಆಧಾರ್ ಕಾರ್ಡ್, ಕೃಷಿ ಇಲಾಖೆ ನೀಡುವ ಎಎಫ್‌ಐಡಿ ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು. ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಜಿನ್ನಿಂಗ್ ಮತ್ತು ಪ್ರಸ್ಸಿಂಗ್ ಘಟಕದಲ್ಲಿ ಅಥವಾ ಹತ್ತಿರದ ಭಾರತೀಯ ಹತ್ತಿ ನಿಗಮ ಸೂಚಿಸಿದ ಖಾಸಗಿ ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಗಳಲ್ಲಿ ನೋಂದಾಯಿತ ರೈತರು ಹತ್ತಿ ಮಾರಾಟ ಮಾಡಬಹುದು.
ಮಧ್ಯಮ ಪ್ರಧಾನ ಹತ್ತಿಗೆ ಕ್ವಿಂಟಲ್‌ಗೆ ₹7,710, ಉದ್ದ ಪ್ರಧಾನ ಹತ್ತಿಗೆ ₹8,110 ದರ ನಿಗದಿಪಡಿಲಾಗಿದ್ದು ಹತ್ತಿಯ ಗುಣಮಟ್ಟ ಪರಿಶೀಲಿಸಿ ಅಧಿಕಾರಿಗಳು ಧರ ನಿಗದಿ ಪಡಿಸಲಿದ್ದಾರೆ ಎಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಜಯವಂತರಾವ್ ಪತಂಗೆ, ಉಪಾಧ್ಯಕ್ಷ ಶಶಿಧರ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಶೇಖ್ ಹುಸೇನ್ ಮತ್ತು ಪ್ರಧಾನ ವ್ಯವಸ್ಥಾಪ ಬಂದಯ್ಯ ಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.