ಮಾನ್ವಿ (ರಾಯಚೂರು ಜಿಲ್ಲೆ): ಕೋವಿಡ್ ದೃಢವಾಗಿ ನಾಲ್ಕು ದಿನಗಳ ಹಿಂದೆ ಒಪೆಕ್ ಆಸ್ಪತ್ರೆಗೆ ದಾಖಲಾಗಿದ್ದ ಮಾನ್ವಿ ಪಟ್ಟಣ ಠಾಣೆಯ ಎಎಸ್‌ಐ ಸೂಗಪ್ಪ (55)ಅವರು ಶನಿವಾರ ಮೃತಪಟ್ಟಿದ್ದಾರೆ.
ದೇವದುರ್ಗ ತಾಲ್ಲೂಕು ಶಾವಂತಗೇರಾ ಗ್ರಾಮದವರಾಗಿದ್ದು, ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬರು ಪುತ್ರ ಇದ್ದಾರೆ. ಕೋವಿಡ್ ನಿಯಮಾನುಸಾರ ರಾಯಚೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕೋವಿಡ್‌ನಿಂದ ಒಟ್ಟು ಇಬ್ಬರು ಮೃತಪಟ್ಟಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.