
ರಾಯಚೂರು: ಜಿಲ್ಲೆಯ ಯಾಪಲದಿನ್ನಿ ಗ್ರಾಮ ಪಂಚಾಯಿತಿ ವತಿಯಿಂದ ಸ್ಮಶಾನ ಕಾರ್ಮಿಕರಿಗೆ ಬುಧವಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ವತಿಯಿಂದ ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಆಡಳಿತ ಯಾಪಲದಿನ್ನಿ ಗ್ರಾಮ ಪಂಚಾಯಿತ ವ್ಯಾಪ್ತಿಯ ವಡೆಪಲ್ಲಿ, ಬೂರ್ದಿಪಾಡು, ನಾಗನದೂಡ್ಡಿ ಗ್ರಾಮಗಳ ಸ್ಮಶಾನ ಕಾರ್ಮಿಕರಿಗೆ ಕುಣಿ ತೋಡಲಿಕ್ಕೆ ಅಗತ್ಯ ಸಾಮಾಗ್ರಿ, ಹಲಿಗೆ ಹಲಿಗೆ ಹಾಗೂ ಕೈ ಗವಸು ಬೂಟ್ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಬಿ.ಉಮೇಶ, ಅಭಿವೃದ್ಧಿ ಅಧಿಕಾರಿ ದತ್ತುಕುಮಾರ್, ಸದಸ್ಯೆ ಸುಜಾತ ಉರುಕುಂದಪ್ಪ, ಸಂಜನಾ ಈರಣ್ಣ, ಬಸವರಾಜ ನಾಯಕ, ರವೀಂದ್ರಗೌಡ, ಜಗನ್ನಾಥ, ಮಸಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಜಿ.ವಿರೇಶ, ಹೋಬಳಿ ಘಟಕದ ಅಧ್ಯಕ್ಷ ಚಂದ್ರಪ್ಪ ಬೂರ್ದಿಪಾಡು, ಕಾರ್ಯದರ್ಶಿ ಶ್ರೀನಿವಾಸ ವಡೆಪಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ರಂಗಪ್ಪ ಯಾಪಲದಿನ್ನಿ, ಸಿಬ್ಬಂದಿ ಮಲ್ಲಿಕಾರ್ಜುನ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.