ADVERTISEMENT

ಮಳೆ: ಸಜ್ಜೆ ಬೆಳೆ ಹಾಳು

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:25 IST
Last Updated 25 ಜುಲೈ 2020, 7:25 IST
ಮುಳೆಗೆ ಮುದಗಲ್ ಸಮೀಪದ ಗುಡಿಹಾಳ ಗ್ರಾಮದಲ್ಲಿ ಸಜ್ಜೆ ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ
ಮುಳೆಗೆ ಮುದಗಲ್ ಸಮೀಪದ ಗುಡಿಹಾಳ ಗ್ರಾಮದಲ್ಲಿ ಸಜ್ಜೆ ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ   

ಮುದಗಲ್: ಸುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಗೆ ಸಮೀಪದ ಗುಡಿಹಾಳ ಗ್ರಾಮದಲ್ಲಿ ಸಜ್ಜೆ ಬೆಳೆ ನೆಲಕ್ಕೆ ಬಿದ್ದು ಹಾಳಾಗಿ ರೈತರಿಗೆ ತೊಂದರೆಯಾಗಿದೆ.

ಮುಂಗಾರು ಮಳೆಗೆ ವಿವಿಧ ಬೆಳೆಗಳ ಬಿತ್ತನೆ ಮಾಡಿದರು. ಸಜ್ಜೆ ಫಸಲು ಕಾಳು ಕಟ್ಟುವ ಹಂತದಲ್ಲಿ ಜೋರಾಗಿ ಸುರಿದ ಮಳೆಗೆ ಗುಡಿಹಾಳ ಗ್ರಾಮದ ಬಸಪ್ಪ ಎಂಬರ ಸಜ್ಜೆ ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ. ಗುಡಿಹಾಳ, ಮಟ್ಟೂರು, ಜಕ್ಕರಮಡು, ಕನ್ನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕೈಗೆ ಬಂದ ಬೆಳೆ ಮಳೆಗೆ ಬೆಳೆ ಹಾಳಾಗುವ ಹಂತದಲ್ಲಿವೆ. ಮೇವು ಜಾನುವಾರುಗಳ ಉಪಯೋಗಕ್ಕೆ ಬಾರದಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT