ADVERTISEMENT

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ: ಅಭಿನವ ಶ್ರೀ

​ಪ್ರಜಾವಾಣಿ ವಾರ್ತೆ
Published 28 ಮೇ 2022, 12:32 IST
Last Updated 28 ಮೇ 2022, 12:32 IST
ಸಿರವಾರದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಲಕಲ್ಲು ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಸಿರವಾರದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಲಕಲ್ಲು ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಸಿರವಾರ: ದಾಂಪತ್ಯ ಜೀವನದ ಮುಂದಿನ ದಿನಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಯಶಸ್ಸು ರೂರಲ್ ಡೆವಲಪ್ ಮೆಂಟ್ ಸೋಸೈಟಿ ವತಿಯಿಂದ ಶುಕ್ರವಾರ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತನಾಡಿದರು.

ಸಾಮೂಹಿಕ ವಿವಾಹದಲ್ಲಿ 30 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ADVERTISEMENT

ನೀಲಗಲ್ ಬೃಹನ್ಮಠದ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಫಾದರ್ ರಾಜಕುಮಾರ, ಖಾಜಿ ಖಾದ್ರಿ, ಮಹಾದೇವಮ್ಮ ಅರಕೇರ, ಮಾನಪ್ಪ ನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ, ಬಾಲಸ್ವಾಮಿ ಕೊಡ್ಲಿ, ದಾನನಗೌಡ, ಎಚ್.ಕೆ.ಅಮರೇಶ, ನರಸಿಂಹರಾವ್ ಕುಲಕರ್ಣಿ, ಅಯ್ಯಪ್ಪ ನಾಯಕ, ರಮೇಶ ದರ್ಶನಕರ್, ಆಯೋಜಕರಾದ ದುರ್ಗಪ್ರಸಾದ್, ಪ್ರೇಮ ಪ್ರಸಾದ್ ವಿಜಯ ಕುಮಾರ, ದೇವರಾಜ, ಜಯರಾಜ್, ಸುಂದರ್, ಮಹೇಶ ಶಿಕ್ಷಕರು, ಅರುಣ್ ಕುಮಾರ, ರಾಮ್ ಜ್ಞಾನಮಿತ್ರ, ಮಲ್ಲಪ್ಪ, ಗ್ಯಾನಪ್ಪ, ದಾನೇಲ್, ಸಾಮೇಲಪ್ಪ ನ್ಯಾಯಬೆಲೆ‌ ಅಂಗಡಿ, ಮಲ್ಲಪ್ಪ ಜಯಪ್ಪ, ಗುತ್ತೆದಾರ, ಶಂಕರಪ್ಪ, ಮನೋಹರ, ಲಕ್ಷ್ಮಣ, ನಾಗರಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.