ರಾಯಚೂರು: ಶಿಕ್ಷಣ ಜಾಗೃತಿ ಹಾಗೂ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ಬೆಂಗಳೂರಿನ ಹೇಮಂತ್ ಹಾಗೂ ಧನುಷ್ ಸೈಕಲ್ ಜಾಥಾ ನಡಿಸಿದ್ದು, ಶುಕ್ರವಾರ ರಾಯಚೂರಿಗೆ ಆಗಮಿಸಿ ಜಾಗೃತಿ ಮೂಡಿಸಿದರು.
ಕಳೆದ ಜುಲೈ 10ರಂದು ಬೆಂಗಳೂರಿನಿಂದ ಸೈಕಲ್ ಜಾಥಾ ಆರಂಭಿಸಿದ್ದು 24 ಸಾವಿರ ಕಿ.ಮೀ ಸಂಚರಿಸಿ ಲಿಮ್ಕಾ ದಾಖಲೆ ಮಾಡುವ ಆಸೆ ಇದೆ. ಪ್ರತಿದಿನ 110ರಿಂದ 120 ಕಿ.ಮೀ ಪ್ರಯಾಣ ಮಾಡುತ್ತಿದ್ದೇವೆ ಎಂದು ಹೇಮಂತ್ ಹಾಗೂ ಧನುಷ್ ತಿಳಿಸಿದರು.
ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ನಿಜಾನಂದರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಶಿವನಗೌಡ ಪಾಟೀಲ, ವಿಜಯ ಕುಮಾರ ಸಜ್ಜನ ಇಬ್ಬರನ್ನು ಸ್ವಾಗತಿಸಿ ಜಾಥಾಗೆ ಬೆಂಬಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.