ಲಿಂಗಸುಗೂರು: ಇಲ್ಲಿನ ಜಿಟಿಟಿಸಿ ಕಾಲೇಜು ಆವರಣದಲ್ಲಿರುವ ಸುರಪುರದ ರಾಣಿ ಈಶ್ವರಮ್ಮನವರ ಸಮಾಧಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಶನಿವಾರ ಮನವಿ ಸಲ್ಲಿಸಿದರು.
ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಅವರ ಮರಣದ ನಂತರ ಅವರ ಪತ್ನಿ ರಾಣಿ ಈಶ್ವರಮ್ಮನವರು ಸಂಸ್ಥಾನವನ್ನು ಆಳಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ತಿರುಪತಿಗೆ ತೀರ್ಥಯಾತ್ರೆಗೆ ಹೋಗುವಾಗ ರಾಣಿ ಈಶ್ವರಮ್ಮ ಲಿಂಗಸುಗೂರಿನಲ್ಲಿ ನಿಧನರಾಗಿದ್ದಾರೆ. ಅವರನ್ನು ಸರ್ಕಾರಿ ತೋಟ, ಈಗಿನ ಜಿಟಿಟಿಸಿ ಕಾಲೇಜಿನ ಆವರಣದಲ್ಲಿ ಸಮಾಧಿ ಮಾಡಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸಮಾಧಿ ಅಭಿವೃದ್ಧಿಗೊಳಿಸಲು ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರಾಜೇಶ ನಾಯಕ, ಅಜಯಕುಮಾರ ಶಿವಂಗಿ, ಬಸವರಾಜ ನಾಯಕ ಹಾಗೂ ಅಶೋಕ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.