ADVERTISEMENT

ದೇವದುರ್ಗ | ಗಣೇಕಲ್‌ ಜಲಾಶಯಕ್ಕೆ ಎಸ್.ಬಂಗಾರಪ್ಪ ಹೆಸರಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 15:32 IST
Last Updated 26 ಆಗಸ್ಟ್ 2023, 15:32 IST
ಶಾಂತಗೌಡ ಗುತ್ತೇದಾರ್
ಶಾಂತಗೌಡ ಗುತ್ತೇದಾರ್   

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಎನ್. ಗಣೇಕಲ್‌ ಗ್ರಾಮದಲ್ಲಿರುವ ಗಣೇಕಲ್‌ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಹೆಸರಿಡಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಶಾಂತಗೌಡ ಗುತ್ತೇದಾರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ನಾಯಕ ಒತ್ತಾಯಿಸಿದರು.

ಎನ್.ಗಣೇಕಲ್ ಗ್ರಾಮದಲ್ಲಿರುವ ಬೃಹತ್ ಕೆರೆಯನ್ನು ಜಲಾಶಯ ಮಾಡಲು 1991-92ನೇ ಸಾಲಿನಲ್ಲಿ ಎಸ್‌.ಬಂಗಾರಪ್ಪ ಅವರು ಆದೇಶ ಹೊರಡಿಸಿದ್ದರು. ಸುಮಾರು 290 ಹೆಕ್ಟೇರ್ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಂಡು ಬೃಹತ್ ಜಲಾಶಯ ನಿರ್ಮಿಸಲು ಮುನ್ನಡಿ ಬರೆದು ರಾಯಚೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರಾಯಚೂರು ಜಿಲ್ಲೆ ಹಿಂದುಳಿದ ಪ್ರದೇಶಕ್ಕೆ ಈ ಸೌಲಭ್ಯ ಕಲ್ಪಿಸಿಕೊಟ್ಟಿರುವ ದಿ. ಎಸ್‌.ಬಂಗಾರಪ್ಪ ಜಲಾಶಯ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಕೆರೆಯ ಪಕ್ಕದಲ್ಲಿ ಉದ್ಯಾನ ನಿರ್ಮಿಸಿ ಅವರ ಪುತ್ಥಳಿಯನ್ನು ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ರೈತ ಸಂಘದ ಮುಖಂಡ ಸತ್ಯಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.