ADVERTISEMENT

ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:17 IST
Last Updated 23 ಡಿಸೆಂಬರ್ 2025, 5:17 IST
ಜಾಲಹಳ್ಳಿ ಪಟ್ಟಣದ ಸಹಕಾರ ಸಂಘದಿಂದ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘಟನೆಯಿಂದ ಸಹಕಾರ ಸಂಘದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು
ಜಾಲಹಳ್ಳಿ ಪಟ್ಟಣದ ಸಹಕಾರ ಸಂಘದಿಂದ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘಟನೆಯಿಂದ ಸಹಕಾರ ಸಂಘದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು   

ಜಾಲಹಳ್ಳಿ: ಪಟ್ಟಣದ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದಿಂದ ತೊಗರಿ ಖರೀದಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಮುಖಂಡರು ಸಹಾಕರ ಸಂಘದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸಂಘಟನೆಯ ಅಧ್ಯಕ್ಷ ಹನುಮಂತ ಮಡಿವಾಳ ಮಾತನಾಡಿ,‘ಡಿ.17ರವರೆಗೆ ತೊಗರಿ ಬೆಳೆದ ರೈತರಿಂದ ನೋಂದಣಿ ಮಾಡಿಕೊಂಡಿದ್ದಾರೆ. ಜಾಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವಂತಹ ವಿವಿಧ ಗ್ರಾಮಗಳ ರೈತರು ಈಗಾಗಲೇ ತೊಗರಿ ರಾಶಿ ಮಾಡಿದ್ದಾರೆ. ಕೇಂದ್ರ ಸರ್ಕಾರ ತೊಗರಿಗೆ ಎಂಎಸ್‌ಪಿ ದರ ₹8,000 ನಿಗದಿ ಪಡಿಸಿದೆ. ಅದರೆ, ಮಾರುಕಟ್ಟೆಯಲ್ಲಿ ₹6,700 ಮಾತ್ರ ಇದೆ. ಆದ್ದರಿಂದ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ, ಶೀಘ್ರವೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಕ್ತೂಮ್ ಬಾಷಾ ಪರಾಶಿ, ಸಂಘಟನೆಯ ಕಾರ್ಯದರ್ಶಿ ರಂಗನಾಥ ನಾಯಕ ಬುಂಕಲದೊಡ್ಡಿ, ದುರಗಪ್ಪ ನಾಯಕ, ಹನುಮಂತ ಜೆ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.