ADVERTISEMENT

ಮುನಿರತ್ನ ಶಾಸಕ ಸ್ಥಾನ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 14:00 IST
Last Updated 22 ಸೆಪ್ಟೆಂಬರ್ 2024, 14:00 IST
ಕೆ.ಜಿ.ವೀರೇಶ
ಕೆ.ಜಿ.ವೀರೇಶ   

ರಾಯಚೂರು: ‘ಶಾಸಕ ಮುನಿರತ್ನ ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ ಆರೋಪದ ಮೇಲೆ ಜೈಲಿಗೆ ಹೋಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಯಚೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಜಿ.ವೀರೇಶ ಒತ್ತಾಯಿಸಿದ್ದಾರೆ.

ಮುನಿರತ್ನ ಹನಿಟ್ರ್ಯಾಪ್ ಮೂಲಕ ಜೀವ ವಿರೋಧಿ ಏಡ್ಸ್ ರೋಗವನ್ನು ಹರಡುವ ದುಷ್ಕೃತ್ಯದ ಆರೋಪಗಳನ್ನು ಹೊತ್ತು ಜೈಲು ಪಾಲಾಗಿದ್ದಾರೆ. ಅವರು ಶಾಸಕರಾಗಿ ಮಾಡಿದ ಪ್ರತಿಜ್ಞೆಗೆ ಅಪಮಾನ ಉಂಟು ಮಾಡಿರುವುದಲ್ಲದೇ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ದೂರಿದ್ದಾರೆ.

ಶಾಸನ ಸಭೆಯ ಘನತೆಯನ್ನು ಎತ್ತಿ ಹಿಡಿಯಲು ಈ ಕೂಡಲೇ ಅವರ ಶಾಸನಸಭಾ ಸದಸ್ಯ ಸ್ಥಾನ ಅಮಾನತಿನಲ್ಲಿಡಬೇಕು ಮತ್ತು ಅವರ ಮೇಲಿನ ಎಲ್ಲ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.