ಪಿಎಸ್ಐ ಅವಿನಾಶ ಕಾಂಬಳೆ
ರಾಯಚೂರು: ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ರಾಯಚೂರು ಗ್ರಾಮಾಂತರ ವ್ಯಾಪ್ತಿಯ ಇಡಪನೂರು ಪೊಲೀಸ್ ಠಾಣೆ ಪಿಎಸ್ಐ ಅವಿನಾಶ ಕಾಂಬಳೆ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಪುಟ್ಟಮಾದಯ್ಯ ಅಮಾನತು ಮಾಡಿದ್ದಾರೆ.
ಠಾಣೆಗೆ ಸರಿಯಾಗಿ ಹಾಜರಾಗದಿರುವುದು, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿರುವುದು ಹಾಗೂ ಅಪಘಾತ ನಡೆದ ವೇಳೆ ಸ್ಥಳ ಪರಿಶೀಲನೆಗೆ ವಿಳಂಬ ಧೋರಣೆ ಅನುಸರಿಸುವುದು ಸೇರಿದಂತೆ ಇನ್ನೂ ಕೆಲ ದೂರುಗಳು ಬಂದ ಪ್ರಯುಕ್ತ ಇಡಪನೂರು ಪೊಲೀಸ್ ಠಾಣೆ ಪಿಎಸ್ಐ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪುಟ್ಟಮಾದಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.