ರಾಯಚೂರು: ಜಿಲ್ಲೆಯ ದೇವದುರ್ಗ ಹಾಗೂ ಸಿರವಾರ ತಾಲ್ಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿದೆ.
ದೇವದುರ್ಗದಲ್ಲಿ ಗರಿಷ್ಠ 65 ಮಿ.ಮೀ ಮಳೆ ಸುರಿದಿದ್ದು, ಸೋಮವಾರ ಸಂಜೆ ಮಳೆಯ ನೀರು ರಸ್ತೆ ತುಂಬ ಹರಿದು ಬಸ್ ನಿಲ್ದಾಣಕ್ಕೂ ನುಗ್ಗಿತ್ತು. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಪರದಾಡಬೇಕಾಯಿತು. ಮಂಗಳವಾರ ಬೆಳಿಗ್ಗೆ ವರೆಗೂ ನಿಲ್ದಾಣ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು.
ದೇವದುರ್ಗ ತಾಲ್ಲೂಕಿನ ಗಬ್ಬೂರಲ್ಲಿ 46.1 ಮಿ.ಮೀ, ಗಲಗದಲ್ಲಿ 17 ಮಿ.ಮೀ ಅರಕೇರಾದಲ್ಲಿ 9.6 ಮಿ.ಮೀ, ಮಾನ್ವಿಯಲ್ಲಿ 6.2 ಮಿ.ಮೀ, ಮಾನ್ವಿ ತಾಲ್ಲೂಕಿನ ಕುರಡಿಯಲ್ಲಿ 11.4, ರಾಜಲಬಂಡಾದಲ್ಲಿ 8 ಮಿ.ಮೀ, ಸಿರವಾರದಲ್ಲಿ 16.2 ಮಿ.ಮೀ, ತಾಲ್ಲೂಕಿನ ಕಲ್ಲೂರಲ್ಲಿ 24.4 ಮಿ.ಮೀ, ಮಲ್ಲಟದಲ್ಲಿ 15 ಮಿ.ಮೀ, ಕವಿತಾಳದಲ್ಲಿ 9 ಮಿ.ಮೀ ಹಾಗೂ ಕುರಕುಂದಾದಲ್ಲಿ 5 ಮಿ.ಮೀ ಮಳೆ ಸುರಿದಿದೆ.
ರಾಯಚೂರು ನಗರದಲ್ಲಿ ಬೆಳಿಗ್ಗೆ ಸಾಧಾರಣ ಮೋಡ ಕವಿದ ವಾತಾವರಣ ಹಾಗೂ ಬಿಸಿಲು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.