ADVERTISEMENT

ದೇವದುರ್ಗ; 15 ಬಾಲ ಕಾರ್ಮಿಕದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 15:47 IST
Last Updated 9 ಜನವರಿ 2025, 15:47 IST

ದೇವದುರ್ಗ: ಪಟ್ಟಣದಲ್ಲಿ ಗೂಡ್ಸ್ ವಾಹನಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದ 15 ಬಾಲಕಾರ್ಮಿಕರನ್ನು ರಕ್ಷಣಾ ತಂಡ ಗುರುವಾರ ರಕ್ಷಿಸಿದೆ.

ಪಟ್ಟಣದ ಮೂಲಕ ತೆರುಳುತ್ತಿದ್ದ ಗೂಡ್ಸ್ ವಾಹನಗಳನ್ನು ತಡೆದ ಶಿಕ್ಷಣ, ಪೊಲೀಸ್, ಕಾರ್ಮಿಕ ಹಾಗೂ ಸಾರಿಗೆ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ದಾಳಿ ನಡೆಸಿ 15 ಮಕ್ಕಳನ್ನು ರಕ್ಷಿಸಿ ಅವರು ಓದುತ್ತಿದ್ದ ಶಾಲೆಗಳಿಗೆ ದಾಖಲಿಸಲಾಗಿದೆ ಎಂದು ಕಾರ್ಮಿಕ ನಿರೀಕ್ಷಕ ಮಲ್ಲಪ್ಪ ದೊರೆ ತಿಳಿಸಿದರು.

ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್ಐ ನಾರಾಯಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಿಕ್ಕಯ್ಯ, ಹುಸೇನ್, ನಾಯಕ, ಸಾರಿಗೆ ನಿರೀಕ್ಷಕರ ರಾಕೇಶ.ಎಂ, ಇಸಿಒಗಳಾದ ರಾಜನಗೌಡ, ವೆಂಕಟೇಶ, ಬಿ ಆರ್ ಪಿ ಗಳಾದ ಶಿವಕುಮಾರ ನಾಡಗೌಡ, ವೆಂಕಟಚಲಪತಿ, ಸಿಆರ್ ಪಿ ಗಳಾದ ಸೋಮಶೇಖರ ದೊರೆ, ಟ್ರಾಫಿಕ್ ಪೊಲೀಸ್ ಸಿಬ್ಬಂದಿ  ಸಂಗಪ್ಪ, ಮೋಹನ, ಡಾನ್ ಬಾಸ್ಕೋ ಸಮಾಜ ಸೇವ ಸಂಸ್ಥೆಯ ಬಸವಲಿಂಗ ಮೇತ್ರಿ ಮತ್ತು ನಾಗರಾಜ ನೇತೃತ್ವದ ತಂಡ ವಾಹನಗಳ ಮೇಲೆ ಕಾರ್ಯಾಚರಣೆ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.