ದೇವದುರ್ಗ: ತಾಲ್ಲೂಕಿನ ಎನ್.ಗಣೇಕಲ್ - ಮಸೀದಪುರ ರಸ್ತೆ ಬಳಿ ಆಟೊದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ನಿರೀಕ್ಷಕ ಖಲೀಲ್ ಹಮ್ಮದ್ ಹಾಗೂ ಗಬ್ಬೂರು ಠಾಣೆ ಪಿಎಸ್ಐ ಅರುಣಕುಮಾರ ರಾಠೋಡ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ₹32ಸಾವಿರ ಮೌಲ್ಯದ 11 ಕ್ವಿಂಟಲ್ 65 ಕೆಜಿ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ದಲಿತ ಸಂಘಟನೆಯ ಮುಖಂಡರಾದ ತುಕಾರಾಂ ಎನ್.ಗಣೇಕಲ್ ಮತ್ತು ಬಸಲಿಂಗ ಎನ್.ಗಣೇಕಲ್ ಇದ್ದರು.
ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಅರುಣಕುಮಾರ ರಾಠೋಡ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.