ADVERTISEMENT

ಅರಕೇರಾ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 6:55 IST
Last Updated 30 ಅಕ್ಟೋಬರ್ 2025, 6:55 IST
ಅರಕೇರಾ ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ ₹ 4 ಕೋಟಿ ವೆಚ್ಚದ 6 ಹಾಸಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ ನಾಯಕ ಅಡಿಗಲ್ಲು ನೆರವೇರಿಸಿದರು
ಅರಕೇರಾ ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ ₹ 4 ಕೋಟಿ ವೆಚ್ಚದ 6 ಹಾಸಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ ನಾಯಕ ಅಡಿಗಲ್ಲು ನೆರವೇರಿಸಿದರು   

ಅರಕೇರಾ (ದೇವದುರ್ಗ): ಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ನೀಡಿದ ಭರವಸೆಯಂತೆ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕಿ ಕರೆಮ್ಮ ಜಿ ನಾಯಕ ಹೇಳಿದರು.

ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ ₹ 4 ಕೋಟಿ ವೆಚ್ಚದ 6 ಹಾಸಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಅರಕೇರಾ ಮತ್ತು ದೇವದುರ್ಗ ತಾಲ್ಲೂಕಿನಾದ್ಯಂತ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಶಿವಂಗಿ ₹30 ಲಕ್ಷ ವೆಚ್ಚದ ಸಿಸಿ ರಸ್ತೆ, ನಾಗೋಲಿ ₹ 29 ಲಕ್ಷ ವೆಚ್ಚದಲ್ಲಿ 2 ಶಾಲಾ ಕೊಠಡಿ, ಮಲ್ಲೇದೇವರಗುಡ್ಡದಿಂದ ಜಾಗಟಗಲ್ ವಾಯ ಮಲದಕಲ್ ವರೆಗೆ₹ 8 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಅಡಕಲಗುಡ್ಡ ₹20 ಲಕ್ಷ ವೆಚ್ಚದ ಸಿ.ಸಿ ರಸ್ತೆ, ಸಿಂಗೇರದೊಡ್ಡಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ADVERTISEMENT

ಅರಕೇರಾ ತಾಲ್ಲೂಕು ಪಂಚಾಯಿತಿ ಇಒ ಅಣ್ಣಾ ರಾವ್, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ, ಆರೋಗ್ಯ ಇಲಾಖೆ ವಿಮಲಾ, ಆಲ್ಕೋಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ನಾಯಕ, ಈಶಪ್ಪಗೌಡ, ಮೆಹಬೂಬ್ ಸಿದ್ದಲಿಂಗಪ್ಪಗೌಡ, ರಂಗಪ್ಪ ವೈ, ಅಮೀನರೆಡ್ಡಿ ಗುತ್ತೇದಾರ, ಗೋವಿಂದರಾಜ ನಾಯಕ ಕೊತ್ತದೊಡ್ಡಿ, ಸಿದ್ದಣ್ಣ ಗಣೇಕಲ್, ಬಸವ ರೆಡ್ಡಪ್ಪ ನಾಯಕ, ಬಸವರಾಜ ಮರಕಂದಿನ್ನಿ, ಚನ್ನಪ್ಪಗೌಡ, ರಂಗನಾಥ ಜಾಲಹಳ್ಳಿ, ಮಲ್ಲು ನಾಯಕ ಗಲಗ, ಶರಣಬಸವ ನಾಯಕ, ನಾಗರಾಜ, ಕುಪ್ಪಯ್ಯ ಬೋವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.