ADVERTISEMENT

ನ.17ರಂದು ದಿಡ್ಡಿಬಸವೇಶ್ವರ ಮೂರ್ತಿ ಬೆಳ್ಳಿ ಮುಖಕವಚ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:23 IST
Last Updated 16 ನವೆಂಬರ್ 2025, 5:23 IST
ವೀರಭದ್ರಯ್ಯ ಸ್ವಾಮಿ ಅತ್ತನೂರು
ವೀರಭದ್ರಯ್ಯ ಸ್ವಾಮಿ ಅತ್ತನೂರು   

ಸಿರವಾರ: ‘ಕಾರ್ತಿಕ ಮಾಸದ ಪ್ರಯುಕ್ತ ನ. 17ರಂದು ಅತ್ತನೂರಿನ ದಿಡ್ಡಿಬಸವೇಶ್ವರ ಮೂರ್ತಿ ಬೆಳ್ಳಿ ಮುಖಕವಚ ಲೋಕಾರ್ಪಣೆ, ಕಾರ್ತಿಕ ದೀಪೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದು ದಿಡ್ಡಿಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ ಅತ್ತನೂರು ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರಪೇಟೆ ಅತ್ತನೂರು-ರಾಯಚೂರು ರಾಚೋಟಿವೀರ ಶಿವಚಾರ್ಯರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 5 ಗಂಟೆಯಿಂದ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನಡೆಯಲಿವೆ. ಸಂಜೆ 4 ಗಂಟೆಗೆ ಅಭಿನವ ರಾಚೋಟಿ ಶಿವಾಚಾರ್ಯ ಸೇರಿದಂತೆ ವಿವಿಧ ಮಠದ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಮಹಿಳೆಯರ ಕಳಸ, ಸಕಲ ವಾದ್ಯಮೇಳದೊಂದಿಗೆ ದಿಡ್ಡಿ‌ಬಸವೇಶ್ವರ ಬೆಳ್ಳಿ ಮುಖ ಕವಚ ಮೆರವಣಿಗೆ, ಪಲ್ಲಕ್ಕಿ ಉತ್ಸವ ಸೋಮವಾರಪೇಟೆ ಹಿರೇಮಠದಿಂದ ದೇವಸ್ಥಾನದವರೆಗೆ ನಡೆಯಲಿದೆ’ ಎಂದು ಹೇಳಿದರು.

‘ಸಂಜೆ 6.30ಕ್ಕೆ ಕಾರ್ತಿಕ ದೀಪೋತ್ಸವ, ಸಂಗೀತಾ ಸೌರಭ ಹಾಗೂ ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಮಟಮಾರಿ-ಬಿಚ್ಚಾಲಿ ಸಾವಿರ ದೇವರ ಸಂಸ್ಥಾನ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು, ರಾಯಚೂರು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೇರಿದಂತೆ ವಿವಿಧ ಮಠಾಧೀಶರು, ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಶಾಸಕ ಜಿ. ಹಂಪಯ್ಯ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಮಹಾಂತೇಶ ಪಾಟೀಲ ಆತ್ತನೂರು, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಮೆಕೋ ಕಕ್ಷನ್ ಅಧ್ಯಕ್ಷ ಎಂ.ಈರಣ್ಣ, ಚಂದ್ರಶೇಖರ ಪಾಟೀಲ ಮಿರ್ಜಾಪುರ, ಆಲ್ದಾಳ ವೀರಭದ್ರಪ್ಪಗೌಡ, ವೈ. ಶರಣಪ್ಪ ನಾಯಕ ಗುಡದಿನ್ನಿ, ಸಿರವಾರ ಪ.ಪಂ. ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ಅಮರೇಶಗೌಡ, ಬಸವರಾಜ ಗಿಣಿಗಾರ, ಕೆ.ಸುರೇಶ ಸ್ವಾಮಿ, ಪ್ರಕಾಶ ಸಜ್ಜನ, ಮಂಜು ಪಾಟೀಲ ಮ್ಯಾಗಳಮನೆ, ಮಂಜು ಪಾಟೀಲ ಗಣೇಕಲ್ ಹಾಜರಿದ್ದರು.