ಸಿರವಾರ: ‘ಸಾಲ, ಠೇವಣಿ ಇಡುವುದು ಸೇರಿದಂತೆ ಎಲ್ಲಾ ವಿಭಾಗದಲ್ಲೂ ಗ್ರಾಹಕರ ಉತ್ತಮ ಸಹಕಾರದಿಂದಾಗಿ ಜಿಲ್ಲೆಯಲ್ಲಿ ನಮ್ಮ ಸಹಕಾರಿಯು 8ನೇ ಸ್ಥಾನದಲ್ಲಿದ್ದು, ಇದು ನಮ್ಮೆಲ್ಲರ ಹೆಮ್ಮೆಯಾಗಿದೆ’ ಎಂದು ಸಿರಿ ಸಂಜೀವಿನಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಹೇಳಿದರು.
ಪಟ್ಟಣದಲ್ಲಿ ನಡೆದ ಸಿರಿ ಸಂಜೀವಿನಿ ಸೌಹಾರ್ದ ಸಹಕಾರ ಸಂಘದ 12ನೇ ವಾರ್ಷಿಕ ಮತ್ತು 2024-25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಸಹಕಾರ ಸಂಘಗಳಲ್ಲಿ ಸಾಲ ತೆಗೆದುಕೊಂಡವರು ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂಬುವುದೇ ಸಹಕಾರಿಗಳ ಮುಖ್ಯ ಉದ್ದೇಶವಾಗಿದೆ’ ಎಂದರು.
ಸಹಕಾರಿಯ ಸಿಇಒ ಮಹೇಶ ಪಾಟೀಲ ಮಾತನಾಡಿ,‘ಸಹಕಾರಿಯು 2024-25ನೇ ಸಾಲಿನಲ್ಲಿ ₹64.29 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಹೇಳಿದರು.
ಸಹಕಾರಿಯಲ್ಲಿ ಸಾಲ ಪಡೆದು ಮೃತಪಟ್ಟ ಇಬ್ಬರು ಗ್ರಾಹಕರ ಕುಟುಂಬಸ್ಥರಿಗೆ ಸಹಕಾರಿಯ ಸಿರಿ ಸುರಕ್ಷಾ ಯೋಜನೆಯಡಿಯಲ್ಲಿ ತಲಾ ₹25 ಸಾವಿರದ ಚೆಕ್ ವಿತರಿಸಲಾಯಿತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಜ್ಯೋತಿ, ಸಹಕಾರಿಯ ಉಪಾಧ್ಯಕ್ಷ ಜಿ.ವೀರೇಶ, ಸಿರವಾರ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎನ್.ಉದಯಕುಮಾರ, ಜಂಬಲದಿನ್ನಿ, ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ಟಿ.ಬಸವರಾಜ, ಸಹಕಾರಿಯ ನಿರ್ದೇಶಕರಾದ ಹೇರುಂಡಿ ಮಲ್ಲಿಕಾರ್ಜುನ ಸಾಹುಕಾರ, ವೈ.ಭೂಪನಗೌಡ, ಸಹಕಾರಿಯ ಲೆಕ್ಕಪರಿಶೋಧಕರಾದ ರಂಜೀತಕುಮಾರ, ಪಿ.ಕೆ.ಸುಬ್ರಮಣ್ಯಂ ಸೇರಿದಂತೆ ಸಹಕಾರಿಯ ಸದಸ್ಯರು, ಗ್ರಾಹಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.