ADVERTISEMENT

ರಾಯಚೂರು | ದಾಸೋಹ ಕೇಂದ್ರಕ್ಕೆ ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 10:51 IST
Last Updated 6 ಜುಲೈ 2022, 10:51 IST
ಮಸ್ಕಿಯಲ್ಲಿ ಕೊಪ್ಪಳದ ಗವಿಮಠದಲ್ಲಿ ನಿರ್ಮಿಸಲಾಗುತ್ತಿರುವ ದಾಸೋಹ ಕೇಂದ್ರಕ್ಕೆ ದೇಣಿಗೆ ಸಂಗ್ರಹಿಸಲಾಯಿತು
ಮಸ್ಕಿಯಲ್ಲಿ ಕೊಪ್ಪಳದ ಗವಿಮಠದಲ್ಲಿ ನಿರ್ಮಿಸಲಾಗುತ್ತಿರುವ ದಾಸೋಹ ಕೇಂದ್ರಕ್ಕೆ ದೇಣಿಗೆ ಸಂಗ್ರಹಿಸಲಾಯಿತು   

ಮಸ್ಕಿ: ಕೊಪ್ಪಳದ ಗವಿಮಠದಲ್ಲಿ ಆರಂಭಿಸಲಾಗುತ್ತಿರುವ ವಿದ್ಯಾರ್ಥಿಗಳ ದಾಸೋಹ ಕೇಂದ್ರಕ್ಕೆ ಪಟ್ಟಣದ ಛಾಯಾಗ್ರಾಹಕರ ಸಂಘದಿಂದ ದೇಣಿಗೆ ಸಂಗ್ರಹಿಸಲಾಯಿತು.

ಸಂಘದ ಗೌರವಾಧ್ಯಕ್ಷ ಉದಯಕುಮಾರ ಪತ್ತಾರ, ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಶ ನಾಯಕ ನೇತೃತ್ವದ ತಂಡ ಪ್ರಮುಖ ಅಂಗಡಿಗಳಿಗೆ ತೆರಳಿ ದೇಣಿಗೆ ಪಡೆಯಿತು. ₹50 ಸಾವಿರ ಸಂಗ್ರಹವಾಯಿತು. ಛಾಯಾಗ್ರಾಹಕರು ಡಿ.ಡಿ ಮೂಲಕ ಆ ಹಣವನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಕಳುಹಿಸಿದರು.

ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ವಿರಾಪುರ, ಜಿ.ವೆಂಕಟೇಶ ರೆಡ್ಡಿ, ಶ್ರೀಶೈಲ ಕೆ.ನಟರಾಜ, ಅಮರೇಶ ಉದ್ಬಾಳ, ಬಾಷಾ ಕಲ್ಮನಿ, ಮಂಜು ಚನ್ನಳ್ಳಿ, ವೀರೇಶ ರಂಗಾಪುರ, ಚನ್ನಬಸವ ತೋರಣದಿನ್ನಿ, ಹನುಮಂತ ಹಾಲಾಪುರ, ವೀರೇಶ ಹಳ್ಳಿ, ಸಿದ್ದು ಕ್ಯಾತನಟ್ಟಿ, ಅಂಜನೇಯ ಶಂಕರನಗರ ಕ್ಯಾಂಪ್, ಪಂಪಣ್ಣ ಹಂಪನಾಳ, ಶಿವಕುಮಾರ, ನಾಗರಾಜ ಹಾಲಾಪುರ, ನವೀನಕುಮಾರ ಬಳಗಾನೂರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.