ADVERTISEMENT

ರಾಜಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿ ಬೇಡ

ಎಸ್ಟಿ ಮೀಸಲಾತಿಗೆ ಇತರೆ ವರ್ಗಗಳ ಸೇರ್ಪಡೆ: ಸಿ.ಎಂ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 6:21 IST
Last Updated 19 ಜನವರಿ 2023, 6:21 IST
ದುರುಗಣ್ಣ ನಾಯಕ
ದುರುಗಣ್ಣ ನಾಯಕ   

ಸಿರವಾರ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಎಸ್.ಟಿ. ಮೀಸಲಾತಿಯಲ್ಲಿ ಇತರೆ ಸಮುದಾಯಗಳನ್ನು ಸೇರಿಸುವ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಹೇಳಿಕೆ ಹಿಂಪಡೆಯಬೇಕು' ಎಂದು ವಾಲ್ಮೀಕಿ ಸಮಾಜದ ಮುಖಂಡ, ಪಟ್ಟಣ ಪಂಚಾಯಿತಿ ಸದಸ್ಯ ಸೂರಿ ದುರುಗಣ್ಣ ನಾಯಕ ಒತ್ತಾಯಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತಾನಾಡಿದ ಅವರು, ರಾಮನ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಮನನ್ನು ಪರಿ ಚಯಿಸಿದ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇದ ರಿಂದ ಸಮುದಾಯದ ಏಳಿಗೆಗೆ ಮಾರಕ ವಾಗಲಿದ್ದು, ಕೂಡಲೇ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.
ಯಾವುದೇ ಸಮುದಾಯಗಳನ್ನು ಎಸ್.ಟಿ. ಮೀಸಲಾತಿಯಲ್ಲಿ ಸೇರಿಸಲು ಸಾಂವಿಧಾನಿಕ ಮಾನದಂಡಗಳಿವೆ. ಮುಖ್ಯವಾಗಿ ಕುಲಶಾಸ್ತ್ರೀಯ ಅಧ್ಯಯನದ ಜೊತೆಗೆ ಬುಡಗಟ್ಟು ಸಂಸ್ಕೃತಿ ಇರಬೇಕು. ಆದರೆ ಮುಖ್ಯಮಂತ್ರಿಗಳು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದರೂ ಕೂಡ ಹೋದಲೆಲ್ಲಾ ಇತರ ಸಮುದಾಯಗಳನ್ನು ರಾಜಕೀಯವಾಗಿ ಸೆಳೆಯಲು ಎಸ್.ಟಿ.ಮೀಸಲಾತಿಯಲ್ಲಿ ಸೇರಿಸಲಾಗವುದು ಎಂದು ಹೇಳುತ್ತಾ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ.ಇದು ಹೀಗೆ ಮುಂದುವರೆದರೆ ರಾಜ್ಯದಾದ್ಯಂತ ಹೋರಾಟದ ಎಚ್ಚರಿಕೆ ನೀಡಿದರು.

ಚಿನ್ನಾನ್ ನಾಗರಾಜ, ವೆಂಕಟೇಶ ದೊರೆ, ವಸಂತ ನಾಯಕ, ಅಮರೇಶ ನಾಯಕ, ರಂಗನಾಥ ನಾಯಕ, ಯಲ್ಲಪ್ಪ‌ ದೊರೆ, ಮಲ್ಲಿಕಾರ್ಜುನ ನಾಯಕ, ಅಪ್ಪಾಜಿ ನಾಯಕ, ಅಮರೇಶ, ಸೇರಿ ಸಮಾಜದ ಮುಖಂಡರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.