
 ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ
ರಾಯಚೂರು: ತಾಲ್ಲೂಕಿನ ಗಾರಲದಿನ್ನಿ ಗ್ರಾಮದ ಬಳಿ ಗುರುವಾರ ಹತ್ತಿ ಸಾಗಿಸುತ್ತಿದ್ದ ವೇಳೆ ಬೊಲೆರೊ ಪಿಕ್ಅಪ್ ಗೂಡ್ಸ್ ವಾಹನದ ಚಾಲಕನಿಗೆ ಹೃದಯಾಘಾತವಾಗಿ ವಾಹನ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾರಲದಿನ್ನಿಯ ಚಾಲಕ ನರಸಿಂಹ (33) ಮೃತರು. ಗ್ರಾಮದಲ್ಲಿ ಹತ್ತಿ ತುಂಬಿಕೊಂಡು ರಾಯಚೂರು ಕಡೆ ಬರುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ವಾಹನ ನಿಲುಗಡೆ ಮಾಡುವಷ್ಟರಲ್ಲಿ ಪಲ್ಟಿಯಾಗಿದೆ. ವಾಹನ ರಸ್ತೆ ಬದಿಯ ಹತ್ತಿ ಹೊಲದಲ್ಲಿ ಉರುಳಿ ಬಿದ್ದು ಹತ್ತಿ ಚೆಲ್ಲಾಪಿಲ್ಲಿಯಾಗಿದೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.