ADVERTISEMENT

ಚುನಾವಣೆ ಹಬ್ಬವಿದ್ದಂತೆ ಎಲ್ಲರು ಭಾಗವಹಿಸಿ: ಈರಣ್ಣಕೌಜಲಗಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 13:57 IST
Last Updated 5 ಏಪ್ರಿಲ್ 2024, 13:57 IST
ಚಿತ್ರಶೀರ್ಷಿಕೆ: ತುರ್ವಿಹಾಳ ಪಟ್ಟಣ ಸಮೀಪದ 7ಮೈಲ್ ಕ್ಯಾಂಪಿನಲ್ಲಿ ಶುಕ್ರವಾರ ತೃತೀಯ ಲಿಂಗಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು
ಚಿತ್ರಶೀರ್ಷಿಕೆ: ತುರ್ವಿಹಾಳ ಪಟ್ಟಣ ಸಮೀಪದ 7ಮೈಲ್ ಕ್ಯಾಂಪಿನಲ್ಲಿ ಶುಕ್ರವಾರ ತೃತೀಯ ಲಿಂಗಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು   

ತುರ್ವಿಹಾಳ: ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಹಬ್ಬವಿದ್ದಂತೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದು ತಾ.ಪಂ.ಅಧಿಕಾರಿ ಈರಣ್ಣಕೌಜಲಗಿ ಹೇಳಿದರು.

ಪಟ್ಟಣ ಸಮೀಪದ 7ಮೈಲ್ ಕ್ಯಾಂಪಿನಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ತೃತೀಯ ಲಿಂಗಿಗಳಿಗೆ ಗುರುವಾರ ಮತದಾನ ಜಾಗೃತಿ ಹಾಗೂ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ನಡೆಯಿತು.

18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನವನ್ನು ಮಾಡಲೇಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಿರ್ಭೀತರಾಗಿ ಮತದಾನ ಮಾಡಿ ಎಂದರು. ಎನ್‌ಆರ್‌ಎಲ್‌ಎಮ್ ವ್ಯವಸ್ಥಾಪಕ ವೀರಭದ್ರಗೌಡ ಪ್ರತಿಜ್ಞಾವಿಧಿ ಬೋಧಿಸಿದರು.

ADVERTISEMENT

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ತಂಡದ ಶಾಂತಯ್ಯ ಗುರುವಿನ್, ನರೇಗಾ ಐಈಸಿ ಸಂಯೋಜಕ ಥಾಮಸ್ ಪಾಲ್ಗೊಂಡಿದ್ದರು.

ಚಿತ್ರಶೀರ್ಷಿಕೆ: ತುರ್ವಿಹಾಳ ಪಟ್ಟಣ ಸಮೀಪದ 7ಮೈಲ್ ಕ್ಯಾಂಪಿನಲ್ಲಿ ಶುಕ್ರವಾರ ತೃತೀಯ ಲಿಂಗಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.