ADVERTISEMENT

ಬಿಪಿನ್ ರಾವತ್ ಕೊಡುಗೆ ಅಪಾರ: ವಿಜಯಾನಂದ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 15:48 IST
Last Updated 10 ಡಿಸೆಂಬರ್ 2021, 15:48 IST
ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕದ ವತಿಯಿಂದ ರಾಯಚೂರಿನ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಾವನ್ನಪಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕದ ವತಿಯಿಂದ ರಾಯಚೂರಿನ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಾವನ್ನಪಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ರಾಯಚೂರು: ಭಾರತೀಯ ಸೇನಾ ಮುಖ್ಯಸ್ಥಬಿಪಿನ್ ರಾವತ್ ಅವರು ಸಿಡಿಎಸ್ ತಂಡದ ನಾಯಕರಾಗಿದ್ದರು. ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಯುದ್ಧ ಮಾಡುವ ಕಾರ್ಯವೈಖರಿ ಮಾದರಿಯಾಗಿದೆ ಎಂದುಮಾಜಿ ಸೈನಿಕರ ಗೌರವಾಧ್ಯಕ್ಷ ವಿಜಯಾನಂದ ಹೇಳಿದರು.

ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ ಹುತಾತ್ಮ ಸೈನಿಕರಿಗೆ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಬಿಪಿನ್ ರಾವತ್ ಭೂಸೇನಾ, ವಾಯುಸೇನಾ ಮತ್ತು ನೌಕಾ ಸೇನಾ ಪಡೆಗಳ ದಂಡ ನಾಯಕರಾಗಿದ್ದ ಅವರು ಯುದ್ದದಲ್ಲಿ ಪರಿಣಿತಿ ಹೊಂದಿದ್ದರು. ಅವರ ದೇಶಪ್ರೇಮ, ಕಾರ್ಯವೈಖರಿ ಮೆಚ್ಚುವಂತಹದ್ದು, ಹೆಲಿಕ್ಯಾಪ್ಟರ್ ನಲ್ಲಿ ದುರಂತ ಸಾವನ್ನಪಿದ್ದು ವಿಷಾದನೀಯ ಎಂದು ಹೇಳಿದರು.

ADVERTISEMENT

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಸುಂದರ್ ಸಿಂಗ್, ಸಂಘಟನಾ ಕಾರ್ಯದರ್ಶಿ ಮೀರ್ ಅಬ್ದುಲ್ ರಹೀಂ, ಮನೋಹರ್ ಸಿಂಗ್, ಎಸ್. ಚಂದ್ರಶೇಖರ, ಅಜೀಜ್ ಸಾಬ್, ಮಂಜುನಾಥ, ಶ್ಯಾಮ್ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.