ADVERTISEMENT

ಅಗ್ನಿಪಥ್ ಸೇನಾ ತರಬೇತಿ ಪಡೆದ ಯೋಧರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:24 IST
Last Updated 6 ಅಕ್ಟೋಬರ್ 2023, 16:24 IST
ಮಾನ್ವಿ ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ಶುಕ್ರವಾರ ಅಗ್ನಿಪಥ್ ಯೋಜನೆ ಅಡಿಯಲ್ಲಿ ಭಾರತೀಯ ಸೇನಾ ತರಬೇತಿ ಮುಗಿಸಿ ಆಗಮಿಸಿದ ಮೂವರು ಯೋಧರನ್ನು ಸನ್ಮಾನಿಸಲಾಯಿತು
ಮಾನ್ವಿ ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ಶುಕ್ರವಾರ ಅಗ್ನಿಪಥ್ ಯೋಜನೆ ಅಡಿಯಲ್ಲಿ ಭಾರತೀಯ ಸೇನಾ ತರಬೇತಿ ಮುಗಿಸಿ ಆಗಮಿಸಿದ ಮೂವರು ಯೋಧರನ್ನು ಸನ್ಮಾನಿಸಲಾಯಿತು   

ಮಾನ್ವಿ: ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ಶುಕ್ರವಾರ ವಂದೇ ಮಾತರಂ ಯುವಕ ಸಂಘದ ವತಿಯಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಭಾರತೀಯ ಸೇನಾ ತರಬೇತಿ ಮುಗಿಸಿ ಆಗಮಿಸಿದ ಮೂವರು ಯೋಧರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಮಹಾರಾಷ್ಟ್ರದ ನಾಸಿಕ್‌ನಲ್ಲಿ 7 ತಿಂಗಳುಗಳ ಕಾಲ ಸೇನಾ ತರಬೇತಿ‌ ಪಡೆದು ಆಗಮಿಸಿದ ಅಮರೇಶ್ ಕೆ. ಮದ್ಲಾಪುರ, ಹುಸೇನ್ ಬಾಷಾ ಗೋನವಾರ ಮತ್ತು ಮಲ್ಲಿಕಾರ್ಜುನ ಹಿರೇಬಾದರದಿನ್ನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೂವರು ಯೋಧರು ತರಬೇತಿಯ ಅನುಭವಗಳನ್ನು ವಿವರಿಸಿದರು.

ADVERTISEMENT

ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪುರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಮಾಜಿ ಯೋಧ ಜೆ.ಆಂಜನೇಯ ನೀರಮಾನ್ವಿ,ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ದೊಡ್ಡಮನೆ, ರವಿ ಭೋವಿಕರ್, ಸಮಾಜ ಸೇವಕ ಕೆ.ಎಂ ಬಾಷಾ, ಮಾರೆಪ್ಪ, ಶಿವುಮೂರ್ತಿ,ದೇವಣ್ಣ ಭಜಂತ್ರಿ, ಸಂಗಮೇಶ, ರಮೇಶ್, ಮಹ್ಮದ್ ಮೆಕ್ಯಾನಿಕ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.