ADVERTISEMENT

‘ಕೃಷಿ ವಿಜ್ಞಾನಿಗಳಿಗೆ ಕ್ಷೇತ್ರ ಅನುಭವ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 19:36 IST
Last Updated 11 ಮಾರ್ಚ್ 2020, 19:36 IST
ರಾಯಚೂರು ತಾಲ್ಲೂಕು ಮಂಡಲಗೇರಾದಲ್ಲಿ  ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಹಾಗೂ ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿ ಡಾ.ಜಿ.ಎಸ್. ಯಡಹಳ್ಳಿ ಉದ್ಘಾಟಿಸಿ ಮಾತನಾಡಿದರು 
ರಾಯಚೂರು ತಾಲ್ಲೂಕು ಮಂಡಲಗೇರಾದಲ್ಲಿ  ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಹಾಗೂ ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿ ಡಾ.ಜಿ.ಎಸ್. ಯಡಹಳ್ಳಿ ಉದ್ಘಾಟಿಸಿ ಮಾತನಾಡಿದರು    

ರಾಯಚೂರು: ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಸಂಸ್ಥೆಗೆ ಆಯ್ಕೆಯಾದ ಆರು ವಿಜ್ಞಾನಿಗಳಿಗೆ 21 ದಿನಗಳ ತರಬೇತಿ ನಡೆಯುತ್ತಿದ್ದು, ಕ್ಷೇತ್ರದ ಅನುಭವಕ್ಕಾಗಿ ತಾಲ್ಲೂಕಿನ ಮಂಡಲಗೇರಾದಲ್ಲಿ ಈಚೆಗೆ ಒಂದು ದಿನದ ‘ಗ್ರಾಮ ವಿಚಾರ ಗೋಷ್ಠಿ’ ಏರ್ಪಡಿಸಲಾಗಿತ್ತು.

ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಸಂಸ್ಥೆ, ರಾಯಚೂರಿನ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಹಾಗೂ ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿ ಡಾ.ಜಿ.ಎಸ್. ಯಡಹಳ್ಳಿ ಉದ್ಘಾಟಿಸಿದರು.

ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಎ.ಎಂ. ಬೆಂಕಿ ಅಧ್ಯಕ್ಷತೆ ವಹಿಸಿದ್ಧರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಅನುಪಮಾ ಸಿ. ಅವರು ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಪ್ರಗತಿಪರ ರೈತ ಎಸ್. ಬಿ. ಪಾಟೀಲ ಅವರು ಮಾತನಾಡಿದರು.

ರಾಘವೇಂದ್ರ ನಿರೂಪಿಸಿದರು, ಹರೀಶ್ ವಂದಿಸಿದರು. ಡಾ. ಶ್ರೀವಾಣಿ. ಜಿ.ಎನ್ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಆರು ಕೃಷಿ ವಿಜ್ಞಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.