ದಂಡ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ 19 ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ.
ನಿಗದಿತ ಅವಧಿಯೊಳಗೆ ದಂಡ ಭರಿಸದೇ ಇದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರಬಾಬು ಎಚ್ಚರಿಕೆ ನೀಡಿದ್ದಾರೆ.
ದೇವದುರ್ಗ ತಾಲ್ಲೂಕಿನ ನಿಷಾ ಕ್ಲಿನಿಕ್ ₹50 ಸಾವಿರ ದಂಡ. ನ್ಯೂ ಇರ್ಫಾನ್ ಕ್ಲಿನಿಕ್‌ಗೆ ₹25 ಸಾವಿರ, ಶ್ರೀ ಬಸವಾ ಇಮೇಜಿಂಗ್ ಸೆಂಟರ್‌ಗೆ ₹25 ಸಾವಿರ, ಶ್ರೀಬಸವ ಲ್ಯಾಬ್ ಎಕ್ಸರೆ ಅಂಡ್ ಇಸಿಜಿ ಸೆಂಟರ್‌ಗೆ ₹25 ಸಾವಿರ, ದೇಸಾಯಿ ಕ್ಲಿನಿಕ್‌ಗೆ ₹15 ಸಾವಿರ, ಶ್ರೀದೇವಿ ಕ್ಲಿನಿಕ್‌ಗೆ ₹15 ಸಾವಿರ, ಎಸ್.ಬಿ.ಆಸ್ಪತ್ರೆಗೆ ₹15 ಸಾವಿರ, ಬಾಬಾ ಡೈಗ್ನೋಷ್ಟಿಕೆ ಸೆಂಟರ್‌ಗೆ ₹50 ಸಾವಿರ, ಶ್ರೀಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ₹25 ಸಾವಿರ ದಂಡ ವಿಧಿಸಲಾಗಿದೆ.
ಸಿರವಾರ ತಾಲ್ಲೂಕಿನ ಅಮೃತ ಕ್ಲಿನಿಕ್‌ಗೆ ₹15 ಸಾವಿರ ದಂಡ, ವಿಜಯ ಚಂದ್ರಶೇಖರ ಕ್ಲಿನಿಕ್‌ಗೆ ₹15 ಸಾವಿರ, ವೆಂಕಟೇಶ್ವರ ಕ್ಲಿನಿಕ್‌ಗೆ ₹40 ಸಾವಿರ, ಲಿಂಗಸುಗೂರು ತಾಲ್ಲೂಕಿನ ಘನಶ್ರೀ ಲ್ಯಾಬ್‌ಗೆ ₹50 ಸಾವಿರ, ಅನ್ನಪೂರ್ಣ ಲ್ಯಾಬ್‌ಗೆ ₹50 ಸಾವಿರ, ಮೆಡಿಕೇರ್ ಲ್ಯಾಬ್‌ಗೆ ₹15 ಸಾವಿರ, ವಿಜಯ ಕ್ಲಿನಿಕ್‌ಗೆ 15 ಸಾವಿರ ದಂಡ ವಿಧಿಸಲಾಗಿದೆ. ರಾಯಚೂರು ತಾಲ್ಲೂಕಿನ ಪೀಸ್ ಹೆಲ್ತ್ ಕೇರ್‌ಗೆ ₹25 ಸಾವಿರ ದಂಡ, ಸೂಗೂರೇಶ್ವರ ಕ್ಲಿನಿಕ್‌ಗೆ ₹50 ಸಾವಿರ ಹಾಗೂ ಮಾನ್ವಿ ತಾಲ್ಲೂಕಿನ ಪವನ್ ಕ್ಲಿನಿಕ್‌ಗೆ ₹15 ಸಾವಿರ ರೂ ದಂಡ ವಿದಿಸಲಾಗಿದೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲೆಯಲ್ಲಿನ ಕೆಲವು ಖಾಸಗಿ ಕ್ಲಿನಿಕ್‌ಗಳು ಸಂಸ್ಥೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿದ ಬಗ್ಗೆ ಚರ್ಚೆಯಾಗಿತ್ತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.