
ಮುದಗಲ್: ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದ ಯಂಕನಗೌಡ ಅಮರೇಗೌಡ ಪೇಟೆಗೌಡರ 2025ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಒಲಿದು ಬಂದಿದೆ.
ದಿದ್ದಿಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿವರೆಗೆ ಶಿಕ್ಷಣ ಪಡೆದ ಇವರು ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಒಕ್ಕಲುತನ ಮಾಡಲು ಮುಂದಾದರು. ಒಕ್ಕಲುತನ ಜೊತೆಗೆ ದ್ಯಾವಪ್ಪ ಸಾಹುಕರ ಉದ್ಘಾಳ ಅವರ ಹತ್ತಿರ ಸಂಗೀತ ಅಭ್ಯಾಸ ಮಾಡಿದರು.
ಸಂಗೀತ ಶಿಕ್ಷಣ ಪಡೆದ ಇವರು ಬಯಲಾಟ, ಮೂದಂಗ (ಮದ್ದಲ್ಲಿ) ನುಡಿಸುವುದು ರಂಗಭೂಮಿ ಕಲೆಯಲ್ಲಿ ಹಾಮೋನಿಯಂ ನುಡಿಸುವುದು ಮೈಗೊಡಿಸಿಕೊಂಡರು. ಅನೇಕ ಹಳ್ಳಿಗಳಲ್ಲಿ ಶರಣರ, ಸಂತರ, ಅನುಭಾವಿಗಳ ತತ್ವ ಹಾಗೂ ಜಾನಪದ ಗಾಯನ ಮಾಡಿ ವಿವಿಧೆಡೆ ಪ್ರದರ್ಶನ ನೀಡಿದರು.
ರಂಗಭೂಮಿಯಲ್ಲಿ ಏಕಾಭಿನಯ ಪಾತ್ರ ಮಾಡಿ ಈ ಭಾಗದಲ್ಲಿ ಪ್ರಸಿದ್ಧ ಪಡೆದರು. ಅಭಿಮಾನಿಗಳು ಸಂಘ ಸಂಸ್ಥೆಗಳು ಇವರಿಗೆ ‘ತತ್ವಪದ ಭಜನಾ ಗಾಯನ ಗಾರುಡಿಗ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು. ರಾಯಚೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2020ನೇ ಸಾಲಿನ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು. 2022 ನೇ ಸಾಲಿನ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ನಿಮಿತ್ತ ‘ಸಾಂಸ್ಕೃತಿಕ ಕಲಾವೈಭವ ಕಾರ್ಯಕ್ರಮದಲ್ಲಿ ಇವರ ಕಲೆ ಗುರುತಿಸಿ ಕಲಾ ಪ್ರಶಸ್ತಿ ನೀಡಿದರು. 2019 ನೇ ಸಾಲಿನ ಗಿರಿಜನ ಉತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಿದರು.
ಬೆಂಗಳೂರು 2022ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಕಾರ್ಯಕ್ರಮದಲ್ಲಿ ಅಭಿನಂದನೆ ಪತ್ರ ಪಡೆದರು. ಕೊಪ್ಪಳ ಜಿಲ್ಲೆ ಮೈನಹಳ್ಳಿ ರಾಜ್ಯ ಮಟ್ಟದ ಹೊನಲು ಬೆಳಕಿನ ಭಜನಾ ಕಾರ್ಯಕ್ರದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು. ಇದು ಅಲ್ಲದೆ ಇನ್ನೂ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಗ್ರಾಮೀಣ ಪ್ರದೇಶದಲ್ಲಿ ತಮ್ಮ ಕಲೆ ಪ್ರದರ್ಶನ ನೀಡಿದರು ಯಾವುದೇ ಸಂಭಾವನೆ ಪಡೆದಿಲ್ಲ. ತಾವು ಪಡೆದ ಶಿಕ್ಷಣವನ್ನು ಅನೇಕ ಶಿಷ್ಯ ಬಳಗಕ್ಕೆ ಧಾರೆ ಎರೆದಿದ್ದಾರೆ. ಇವರ ಸೇವೆ ಗಮನಿಸಿದ ಕರ್ನಾಟಕ ಜಾನಪದ ಅಕಾಡೆಮಿ 2025ನೇ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ಬಾಲ್ಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಗುರುವಿನಲ್ಲಿ ಸಂಗೀತ ಜ್ಞಾನ ಪಡೆದು ಅನೇಕ ಜಾನಪದ ಕಲೆಗಳ ಅಭ್ಯಾಸ ಮಾಡಿ ಪ್ರದರ್ಶನ ಮಾಡಿದ್ದೇನೆ. ಜಾನಪದ ಅಕಾಡೆಮಿ ಪ್ರಶಸ್ತಿ ಖುಷಿತಂದಿದೆಯಂಕನಗೌಡರ ಪೇಟೆಗೌಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.