ADVERTISEMENT

ಮಾಜಿ ನಕ್ಸಲ್‌ ಹೋರಾಟಗಾರ ನರಸಿಂಹಮೂರ್ತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 14:40 IST
Last Updated 8 ಜನವರಿ 2020, 14:40 IST
ಎಂ. ನರಸಿಂಹಮೂರ್ತಿ ದೊಡ್ಡಿಪಾಳ್ಯ
ಎಂ. ನರಸಿಂಹಮೂರ್ತಿ ದೊಡ್ಡಿಪಾಳ್ಯ    

ರಾಯಚೂರು: ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸಂಬಂಧ ರಾಯಚೂರು ಪೊಲೀಸರು ಬಂಧಿಸಿದ್ದ ಮಾಜಿ ನಕ್ಸಲ್‌ ಹೋರಾಟಗಾರ ನರಸಿಂಹಮೂರ್ತಿ ಅವರನ್ನು ರಾಯಚೂರಿನ ಹೆಚ್ಚುವರಿ ಜೆಎಂಎಫ್‌ಸಿ–3 ನ್ಯಾಯಾಲಯದ ಆದೇಶದಂತೆ ಜಾಮೀನಿನ ಮೇಲೆ ಬುಧವಾರ ಬಿಡುಗಡೆ ಮಾಡಲಾಗಿದೆ.

ರಾಯಚೂರಿನಲ್ಲಿ ಅಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬಂದಿದ್ದ ವಿನೋದ ಅಲಿಯಾಸ್‌ ಬಸವರಾಜ ಅಲಿಯಾಸ್‌ ಎಂ. ನರಸಿಂಹಮೂರ್ತಿ ದೊಡ್ಡಿಪಾಳ್ಯ ಅವರನ್ನು ಅಕ್ಟೋಬರ್‌ 24, 2019 ರಂದು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

18 ವರ್ಷಗಳ ಹಿಂದೆ ದಾಖಲಾಗಿದ್ದ ವಿವಿಧ ಪ್ರಕರಣಗಳ ಆಲಿಸಿದ್ದ 3ನೇ ಜೆಎಂಎಫ್‌ಸಿ ನ್ಯಾಯಾಧೀಶ ಅವಿನಾಶ ಘಾಳಿ ಅವರನ್ನು ನ್ಯಾಯಾಂಗ ಬಂಧನದ ಆದೇಶ ನೀಡಿದ್ದರು. ’ದಾಖಲಾದ ಪ್ರಕರಣಗಳ ಹೊರತಾಗಿ ಆರೋಪಿ ನರಸಿಂಹಮೂರ್ತಿ ಅಗತ್ಯ ಇಲ್ಲವಾದಲ್ಲಿ ಬಿಡುಗಡೆ ಮಾಡಬಹುದು’ ಎಂದು ಬುಧವಾರ ನೀಡಿರುವ ಜಾಮೀನು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.