ಮಂತ್ರಾಲಯ (ರಾಯಚೂರು): ‘ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯದ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಹಾಗೂ ದೇಣಿಗೆ ಸಂಗ್ರಹಿಸಲು ಮಠವು ಯಾವುದೇ ವ್ಯಕ್ತಿ, ಇಲ್ಲವೆ ಏಜೆನ್ಸಿಗೆ ಅಧಿಕಾರ ನೀಡಿಲ್ಲ’ ಎಂದು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.
‘ಶ್ರೀ ರಾಘವೇಂದ್ರ ಮಂತ್ರ ಮಂದಿರದ ಹೆಸರಿನಲ್ಲಿ, 48 ದಿನಗಳ ಕಾಲ ವಿಶೇಷ ಪೂಜೆ ಅಖಂಡ ಮಂಡಲೋತ್ಸವ ನಡೆಸುವುದಾಗಿ ಮತ್ತು ಫೋನ್‌ಪೇ ಅಥವಾ ಗೂಗಲ್‌ಪೇ ಮೂಲಕ 8861983526ಗೆ ಹಣವನ್ನು ಕಳುಹಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿನಂತಿಸಲಾಗುತ್ತಿದೆ. ಇದನ್ನು ಯಾರೂ ನಂಬಬಾರದು’ ಎಂದು ಹೇಳಿದೆ.
‘ಹಿಂದೆಯೂ ದುಷ್ಕರ್ಮಿಗಳು ಹೀಗೆ ಹಣ ಸಂಗ್ರಹಿಸಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದೆ. ಭಕ್ತರು ನಕಲಿ ಸಂದೇಶಗಳಿಗೆ ಮರುಳಾಗಬಾರದು. ಯಾವುದೇ ರೀತಿ ಹಣ ಪಾವತಿ ಮಾಡಬಾರದು. ಅಂತಹ ಯಾವುದೇ ಘಟನೆಗಳನ್ನು ಕಂಡು ಬಂದರೆ ತಕ್ಷಣ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಬೇಕು’ ಎಂದು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.