ADVERTISEMENT

ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ನಾಳೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 13:13 IST
Last Updated 12 ಮಾರ್ಚ್ 2020, 13:13 IST

ರಾಯಚೂರು: ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್‌ನಿಂದ ನಗರದ ಕೃಷಿ ವಿಶ್ವವಿದ್ಯಾಲಯದ ಕಾಲೇಜು ಎದುರಿನ ರೋಟರಿ ಭವನದಲ್ಲಿ ಮಾರ್ಚ್‌ 14 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೂ ಉಚಿತ ಆರೋಗ್ಯ ತಪಾಸಣೆ ಹಾಗೂ ಬಿಪಿಎಲ್‌ ಕುಟುಂಬಗಳಿಗೆ ಆಯುಷ್ಮಾನ್‌ ಭಾರತ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ಮಾಡಲಾಗುವುದು ಎಂದು ವೆಂಕಟಸ್ವಾಮಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ರೋಗ, ನರರೋಗ ಹಾಗೂ ಮೂತ್ರಪಿಂಡ ರೋಗ ತಪಾಸಣಾ ಶಿಬಿರ ಇದಾಗಿದೆ. ಬೆಂಗಳೂರಿನಿಂದ ತಜ್ಞ ವೈದ್ಯರು ಭಾಗವಹಿಸುವರು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವೈದ್ಯರ ಸಲಹೆ ಆಧರಿಸಿ ಬಿಪಿ, ಇಸಿಜಿ, ಎಕೋ ಸ್ಕ್ಯಾನಿಂಗ್‌ನ್ನು ಉಚಿತವಾಗಿ ಮಾಡಲಾಗುವುದು. 1 ರಿಂದ 10 ತರಗತಿವರೆಗಿನ ಮಕ್ಕಳಲ್ಲಿ ಹೃದಯ ಸಮಸ್ಯೆ ಕಂಡುಬಂದರೆ, ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ 9611061234, 9845275118 ಸಂಖ್ಯೆಗೆ ಕರೆ ಮಾಡಬಹುದು.

ADVERTISEMENT

ವಿಜಯಕುಮಾರ್‌ ಸಜ್ಜನ್‌, ಎನ್‌.ಶಿವಶಂಕರ್‌, ರವಿಕುಮಾರ ಗಣೇಕಲ್‌, ರಾಜೇಶಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.