ADVERTISEMENT

ಗಣಪತಿ ವಿಸರ್ಜನೆ: ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 2:41 IST
Last Updated 9 ಸೆಪ್ಟೆಂಬರ್ 2022, 2:41 IST
ಲಿಂಗಸುಗೂರಲ್ಲಿ ಗುರುವಾರ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿ ವಿಸರ್ಜನೆ ಸಂಭ್ರಮದಿಂದ ಜರುಗಿತು
ಲಿಂಗಸುಗೂರಲ್ಲಿ ಗುರುವಾರ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿ ವಿಸರ್ಜನೆ ಸಂಭ್ರಮದಿಂದ ಜರುಗಿತು   

ಲಿಂಗಸುಗೂರು: ಸ್ಥಳೀಯ ದೊಡ್ಡಹನುಮಂತ ದೇವಸ್ಥಾನ ಬಳಿ ಸರ್ವ ಜಾತಿ, ಜನಾಂಗದ ಪರವಾಗಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ಮೂರ್ತಿಯನ್ನು ಸಂಭ್ರಮದಿಂದ ವಿಸರ್ಜಿಸಲಾಯಿತು.

ಗಣೇಶಮೂರ್ತಿ ವಿಸರ್ಜನೆ ಆರಂಭಕ್ಕೆ ಮುಂಚೆ ಒಂಬತ್ತು ದಿನಗಳ ಕಾಲ ಗಣೇಶಮೂರ್ತಿ ಕೊರಳಲ್ಲಿ ರಾರಾಜಿಸುತ್ತಿದ್ದ ಹಾರಗಳ ಹರಾಜು ಪ್ರಕ್ರಿಯೆ ಜರುಗಿತು. ದ್ಯಾಮಣ್ಣ ಫೂಲಭಾವಿ ₹ 1.50 ಲಕ್ಷ ಹರಾಜು ಕೂಗಿ ಹಾರಗಳನ್ನು ತಮ್ಮದಾಗಿಸಿಕೊಂಡರು.

ಶಾಸಕ ಡಿ.ಎಸ್‍. ಹೂಲಗೇರಿ, ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ, ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಡಾ. ಶಿವಬಸಪ್ಪ ಮೆರವಣಿಗೆಗೆ ಹಸಿರು ನಿಶಾನೆ ತೋರಿದರು.

ADVERTISEMENT

ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಣ್ಣ ವಾರದ ಸೇರಿದಂತೆ ಪದಾಧಿಕಾರಿಗಳಾದ ಬಸವರಾಜಗೌಡ ಗಣೆಕಲ್‍, ರಾಜಾ ಶ್ರೀನಿವಾಸ ನಾಯಕ, ಮನೋಹರರೆಡ್ಡಿ, ಪಾಮಯ್ಯ ಮುರಾರಿ, ಶ್ರೀನಿವಾಸ ಅಮ್ಮಾಪುರ, ವೀರನಗೌಡ ಲೆಕ್ಕಿಹಾಳ, ಕೆ, ನಾಗಭೂಷಣ, ಮಂಜುನಾಥ ಕಾಮಿನ್‍, ಸುಧೀರ ಶ್ರೀವಾತ್ಸವ, ಶರಣಬಸವ ಮೇಟಿ, ಅಶೋಕ ದಿಗ್ಗಾವಿ, ಅಮರೇಶ ಗಂಭೀರಮಠ, ಮಲ್ಲಿಕಾರ್ಜುನ ಕೆಂಭಾವಿ, ನಾಗರಾಜ ಗಸ್ತಿ, ಆಂಜನೇಯ ದೇಸಾಯಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.