ADVERTISEMENT

ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ

ಗಾಣಿಗ ಸಮಾಜದ ಅಧ್ಯಕ್ಷ ಬಸಪ್ಪ ಹಳ್ಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 16:22 IST
Last Updated 29 ಜನವರಿ 2023, 16:22 IST
ರಾಯಚೂರಿನಲ್ಲಿ ಭಾನುವಾರ ನಡೆದ ಗಾಣಿಗ ಸಮಾಜದ ಸಭೆಯಲ್ಲಿ ನಿವೃತ್ತ ಶಿಕ್ಷಣಾಧಿಕಾರಿಗಳಾದ ಮಲ್ಲಪ್ಪ ಕಂಪ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಯಚೂರಿನಲ್ಲಿ ಭಾನುವಾರ ನಡೆದ ಗಾಣಿಗ ಸಮಾಜದ ಸಭೆಯಲ್ಲಿ ನಿವೃತ್ತ ಶಿಕ್ಷಣಾಧಿಕಾರಿಗಳಾದ ಮಲ್ಲಪ್ಪ ಕಂಪ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.   

ರಾಯಚೂರು: ‘ಆಡಳಿತ ಮಂಡಳಿಯನ್ನು ಒಗ್ಗೂಡಿಸಿಕೊಂಡು ಗಾಣಿಗ ಸಮಾಜವನ್ನು ಇನ್ನೂ ಎತ್ತರ ಮಟ್ಟಕ್ಕೆ ಒಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಗಾಣಿಗ ಸಮಾಜದ ರಾಯಚೂರು ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಬಸಪ್ಪ ಹಳ್ಳಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

‘ಯಾವುದೇ ತಪ್ಪಾಗಿದ್ದರೂ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ . ಪ್ರತಿಭಾ ಪುರಸ್ಕಾರ ಸೇರಿದಂತೆ ಇನ್ನೂ ಅನೇಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಸಮಾಜವನ್ನು ಸಂಘಟಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣ ಮೇಲುಸ್ತುವಾರಿ ಸಮಿತಿ ರಚಿಸಲಾಯಿತು.

ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಜಿ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಘೋಷಿಸಿದರು. ಮಹಾಂತೇಶ ತುರಮರಿ ಸ್ವಾಗತಿಸಿದರು. ರಾವುತರಾವ್ ಬರೂರು ನಿರೂಪಿಸಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪ ಸಜ್ಜನ್, ಅಣ್ಣಾರಾವ್ ಪಾಟೀಲ, ವಿಜಯಕುಮಾರ ಸಜ್ಜನ್, ಅಮರೇಗೌಡ ಪಾಟೀಲ ಶಕ್ತಿನಗರ, ರವಿ ಸಜ್ಜನ್ ಗೂಡಿಹಾಳ, ಮಲ್ಲೇಶ ಗಾಣಿಗೇರ ಹಾಗೂ ಚಂದ್ರಶೇಖರ ಯರಗೇರ ಇದ್ದರು.

ಪದಾಧಿಕಾರಿಗಳು: ಬಸಪ್ಪ ಹಳ್ಳಿ (ಅಧ್ಯಕ್ಷ), ಶಕುಂತಲಾ ಅಣ್ಣಾರಾವ್ ಪಾಟೀಲ್ (ಗೌರವ ಅಧ್ಯಕ್ಷೆ), ಲಕ್ಷ್ಮಿ ಭಾಯಿ ರಕ್ಕಸಗಿ (ಮಹಿಳಾ ಅಧ್ಯಕ್ಷೆ), ಬಿ.ಸುರೇಶ, ಗೂಡಿಹಾಳ, ಬಿ. ಪ್ರಬಣ್ಣ ಖಾನಾಪೂರ (ಉಪಾಧ್ಯಕ್ಷರು), ಭೀಮಣ್ಣ ವಣಗೇರಿ (ಗೌರವ ಕಾರ್ಯದರ್ಶಿ), ಎಸ್.ಜೆ. ವಿರೇಶ ಕಮಲಾಪೂರು (ಕಾರ್ಯದರ್ಶಿ), ಅಮರೇಗೌಡ ಪಾಟೀಲ ಶಕ್ತಿನಗರ (ಜಂಟಿ ಕಾರ್ಯದರ್ಶಿ), ಬಸವರಾಜಪ್ಪ ಹೊಕ್ರಾಣಿ (ಖಜಾಂಚಿ), ಜಯಶ್ರೀ ಗುರಪ್ಪ ಬಳ್ಳೂರು ಶಕ್ತಿನಗರ (ಕಾನೂನು ಸಲಹೆಗಾರ), ಬಸವರಾಜ, ಪ್ರವೀಣ ಮಾಟಲದಿನ್ನಿ , ಪ್ರಸಾದ, ಶಿವಕುಮಾರ, ಸಿ.ಜಿ. ಶಿವಾನಂದ, ಉಡಮಗಲ್ ಸಂಘಟನಾ ಕಾರ್ಯದರ್ಶಿಗಳು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.