
ಸಿಂಧನೂರು: ತಾಲ್ಲೂಕಿನ ಕೆ.ಹಂಚಿನಾಳ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ₹66 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ಕಾರ್ಯಾಚರಣೆ ನಡೆಸಿದ ತುರ್ವಿಹಾಳ ಠಾಣೆ ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕರ ಮಾಹಿತಿ ಮೇರೆಗೆ ಕೆ.ಹಂಚಿನಾಳ ಗ್ರಾಮದ ಬೋಡೆಪ್ಪ ಯಂಕಪ್ಪ(54) ಎಂಬುವರು ವಾಸಿಸುವ ಟಿನ್ ಶೆಡ್ ಪಕ್ಕದಲ್ಲಿ ಬೆಳೆಸಿದ್ದ ₹ 66 ಸಾವಿರ ಮೌಲ್ಯದ 22.16 ಕೆ.ಜಿಯ 3 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.
ದಾಳಿ ವೇಳೆ ತಾ.ಪಂ ಸಹಾಯಕ ನಿರ್ದೇಶಕ ಅಮರಗುಂಡಪ್ಪ, ಪಂಚರಾದ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಬಾಬುಸಾಬ ಚೌದ್ರಿ, ಸಹಶಿಕ್ಷಕ ಬಸವರಾಜ ಕಡಿವಾಳ ಹಾಗೂ ತೂಕದ ಯಂತ್ರದ ಸಮೇತ ಎಸ್‌ಐ ಸುಜಾತಾ ಡಿ.ಎನ್. ಅವರು ಕಾರ್ಯಾಚರಣೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.