
ಸಿಂಧನೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್‌ಸಿಎಚ್ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ವಿರುಪಾಪುರ ಗ್ರಾಮದ ಆಯಷ್ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 2ನೇ ಅಂಗನವಾಡಿ ಕೇಂದ್ರದಲ್ಲಿ ‘ಜಂತುಹುಳು ರಹಿತ ಮಕ್ಕಳು, ಆರೋಗ್ಯವಂತ ಮಕ್ಕಳು’ ಅಭಿಯಾನ ನಡೆಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಗೀತಾ ಹಿರೇಮಠ ಮಾತನಾಡಿ,‘ಬಯಲು ಬಹಿರ್ದೆಸೆ ಮಾಡುವುದು, ರಕ್ತ ಹೀನತೆಯಿಂದ ಬಳಲುವುದು, ಅಪೌಷ್ಟಿಕತೆಯಿಂದ ಬಳಲುವುದು, ನಿಶಕ್ತಿ ಇರುವುದು, ಊಟ ಮಾಡಿದ ನಂತರ ಪದೇ ಪದೇ ಶೌಚಕ್ಕೆ ಹೋಗುವ ಲಕ್ಷಣಗಳು ಕಂಡು ಬಂದರೆ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಬೇಕು’ ಎಂದು ಸಲಹೆ ನೀಡಿದರು.
ನಂತರ ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ರಾಮಾಂಜನೇಯ ಕುಮಾರ ಮಾತನಾಡಿದರು.
ಪಿಎಚ್‍ಸಿಒ ಇಸ್ಮಾಲಬೀ, ಸಿಎಚ್‍ಒ ಶ್ರೀದೇವಿ, ಆಶಾ ಕಾರ್ಯಕರ್ತೆಯರಾದ ಭೀಮಮ್ಮ, ಭಾರತಿ, ಅಂಗನವಾಡಿ ಸಹಾಯಕಿ ತೆರೆಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.